ಸಿರವಾರ | ಎಪಿಎಂಸಿಯಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಮುಖ್ಯಾಧಿಕಾರಿಗಳಿಂದ ಸ್ಥಳ ವೀಕ್ಷಣೆ
Update: 2025-09-04 19:30 IST
ಸಿರವಾರ: ಪಟ್ಟಣದ ಎಪಿಎಂಸಿ ಜಾಗದಲ್ಲಿ ಶೌಚಾಲಯ ಹಾಗೂ ಮಾರುಕಟ್ಟೆ ನಿರ್ಮಾಣಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯ ಅಧಿಕಾರಿಗಳು ಗುರುವಾರ ಸ್ಥಳ ವೀಕ್ಷಿಸಿದರು.
ಪಟ್ಟಣದಲ್ಲಿ ಪ್ರತಿ ಸೋಮವಾರ ಜರುಗುವ ವಾರದ ಸಂತೆಗೆ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸಬೇಕೆಂಬ ನಿಟ್ಟಿನಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಶುದ್ಧ ಕುಡಿಯುವ ನೀರಿನ ಘಟಕದ 9.99 ಲಕ್ಷ ರೂ. ಅನುದಾನದಲ್ಲಿ ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಅನುಧಾನದಲ್ಲಿ 12 ಲಕ್ಷ ರೂ. ಅನುದಾನದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ವೈ.ಭೂಪನಗೌಡ, ಮುಖ್ಯಾಧಿಕಾರಿ ಸುರೇಶ ಶೆಟ್ಟಿ, ಜೆಇ ಹಸೇನ್, ಎಪಿಎಂಸಿ ಕಾರ್ಯದರ್ಶಿ ರಂಗನಾಥ, ಸಹಾಯಕ ಕಾರ್ಯದರ್ಶಿ ಮಾಳಪ್ಪ, ಸಿಬ್ಬಂದಿಗಳಾದ ವೆಂಕಟೇಶ, ವಿರೇಶ ನೇಕಾರ, ಇಸ್ಮಾಯಿಲ್, ಗುತ್ತಿಗೆದಾರರಾದ ಸಿದ್ದನಗೌಡ ಪಾಟೀಲ್, ರವಿರಾಜ್ ಕಳಸ ಇತರರು ಇದ್ದರು.