ರಾಯಚೂರು: ಡಿ.14ರಂದು ಟ್ಯಾಗೋರ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಟ್ಯಾಗೋರು ಉತ್ಸವ
ರಾಯಚೂರು: ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಡಿ. 14 ರಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಟ್ಯಾಗೋರ್ ಉತ್ಸವ ಸಾಂಸ್ಕೃತಿಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿಜೆ ಇಂಟರ್ ನ್ಯಾಷನಲ್‌ನ ವಿರೇಂದ್ರ ಜಲ್ದಾರ ಹೇಳಿದರು.
ಅವರಿಂದು ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿ, ನಗರದ ಹಳೆಯ ಶಿಕ್ಷಣ ಸಂಸ್ಥೆಯಾಗಿರುವ ಟ್ಯಾಗೋರ ಶಿಕ್ಷಣ ಸಂಸ್ಥೆಯಲಿ 1975ರಿಂದ 2025 ವರೆಗೆ ಶಿಕ್ಷಣ ಪಡೆದ ವಿವಿಧ ವರ್ಷಗಳ ಹಳೆ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಸರಿಗಮಪ ವಿಜೇತ ಶಿವಾನಿ ಸೇರಿದಂತೆ ಅನೇಕ ಸಂಗೀತ ಕಲಾವಿದರು ಭಾಗಿಯಾಗಲಿದ್ದಾರೆ. ಸಂಜೆ 4 ಗಂಟೆಯಿಂದ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಮೊದಲು ಹಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ನಂತರ ಶಿವಾನಿಯವರಿಂದ ಸಂಗೀತ, ಸ್ಯಾಕ್ಸಫೋನ್ ಸಂಗೀತ, ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ನಗರದ ಜನರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಾಯಿ ಧ್ಯಾನಮಂದಿರ ಧರ್ಮಾಧಿಕಾರಿ ಸಾಯಿಕಿರಣ ಆದೋನಿ ಮಾತನಾಡಿ, ಟ್ಯಾಗೋರ ಶಾಲೆಯಲ್ಲಿ ಓದಿರುವ ಹಳೆ ವಿದ್ಯಾರ್ಥಿಗಳಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಲ್ಲರೂ ಒಂದೇ ಸೇರುವ ಸದಾಶಕಾಶ ದೊರೆತಿದೆ. ಸೇವಾ ನಿವೃತ್ತಿ ಹೊಂದಿರುವ ಶಿಕ್ಷಕರು, ಹಳೆ ವಿದ್ಯಾರ್ಥಿಗಳ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದರು.
ಹಳೆ ವಿದ್ಯಾರ್ಥಿ ಪದ್ಮರಾಜ ಮಾಹಿತಿ ನೀಡಿ ಸರಿ ಸುಮಾರು 3 ರಿಂದ 4 ಸಾವಿರ ಹಳೆ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆ, ಸಂಗೀತ ಸೇರಿ ಅನೇಕ ಸಾಧಕರನ್ನು ಗೌರವಿಸಲಾಗುತ್ತದೆ. ಎಲ್ಲರೂ ಬೆಂಬಲಿಸಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ಸಂದರ್ಬದಲ್ಲಿ ವಸಂತರಾವ್ ಪತಂಗೆ, ಶಿವನಗೌಡ, ನರೇಂದ್ರ, ಅಮರೇಶ, ನಿವೃತ್ತ ಶಿಕ್ಷಕ ನಾಗೇಂದ್ರ ನಾಥ, ಸಲೀಂ ಸೇರಿ ಅನೇಕರಿದ್ದರು.