ಡಿ.21 ರಂದು ಬೆಂಗಳೂರಿನಲ್ಲಿ ಜನದನಿ ರ‍್ಯಾಲಿ ಬಹಿರಂಗ ಸಭೆ: ಕೆ.ಜಿ.ವೀರೇಶ
ರಾಯಚೂರು : ಭಾರತ ಕಮ್ಯುನಿಷ್ಟ್ ಪಕ್ಷ ಪರ್ಯಾಯ ರಾಜಕಾರಣಕ್ಕಾಗಿ ಸಿಪಿಐ(ಎಂ) ಜನದನಿ ರ‍್ಯಾಲಿಯನ್ನು ಬೃಹತ್ ಪ್ರತಿಭಟನಾ ಬಹಿರಂಗ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಿಪಿಐ(ಎಂ) ಪಕ್ಷ ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ್ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ, ರೈತ ವಿರೋಧಿ ನೀತಿ ವಿರೋಧಿಸಿ ರ್ಯಾಲಿ ನಡೆಯಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ 30 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಸಿಪಿಐ(ಎಂ) ಪಕ್ಷದಿಂದ ನವಂಬರ್ 1 ರಿಂದ 15 ವರೆಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಮನೆ ಮನೆ ಪ್ರಚಾರ ನಡೆಸಿ ಸಹಿ ಸಂಗ್ರಹಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ರೈತರ ಪರಸ್ಥಿತಿ ಆತಂತ್ರಕ್ಕೆ ಸಿಲುಕುವಂತಾಗಿದೆ. ಬೆಳೆಗೆ ಬೆಲೆಯಿಲ್ಲ. ಬೆಂಬಲ ಬೆಲೆಗೆ ಕಾಯ್ದೆ ಬಲ ಇಲ್ಲದಂತಾಗಿದೆ. ಬಲವಂತದಿಂದ ಭೂ ಸ್ವಾಧೀನ ನಡೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕನಿಷ್ಟ ವೇತನ, ಪಿಂಚಣಿ ಯೋಜನೆಗಳನ್ನು ರೂಪಿಸದೇ ವಂಚಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ ಖಾಸಗೀಕರಣ ಮಾಡಲಾಗುತ್ತಿದ್ದು, ಹಣ ಕೊಟ್ಟವರಿಗೆ ಮಾತ್ರ ಸೌಲಭ್ಯ ಒದಗಿಸುವುದಾಗಿ ಸರ್ಕಾರ ಹೇಳುತ್ತಿದೆ. ರೈತ ವಿರೋಧಿಯಾಗಿರುವ ಮೂರು ಕಾಯ್ದೆಗಳನ್ನು ಸಹ ರಾಜ್ಯ ಸರ್ಕಾರ ಮುಂದುವರೆಸಿಕೊಂಡು ಬರುತ್ತಿದೆ. ಕೋಮುವಾದ, ಜಾತಿವಾದ, ಅಸಮಾನತೆ ಹೆಚ್ಚುತ್ತಿರುವದು ಸೇರಿ 19 ಬೇಡಿಕೆಗಳಿಗೆ ಆಗ್ರಹಿಸಿ ನಡೆಯುವ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಸಿಪಿಐ(ಎಂ) ಪಾಲಿಟ್ ಬ್ಯುರೋ ಸದಸ್ಯ ಯು.ವಾಸುಕಿ ಮಾತನಾಡಲಿದ್ದಾರೆ. ಅನೇಕ ರಾಜ್ಯ ಮುಖಂಡರುಗಳು ಭಾಗವಹಿಸಲಿದ್ದು ಜಿಲ್ಲಾ,ತಾಲುಕಗಳಿಂದ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. ಈ ಸಂದರ್ಬದಲ್ಲಿ ಡಿ.ಎಸ್. ಶರಣಬಸವ, ನಾಗೇಂದ್ರ ಇದ್ದರು.