ಕನಕಪುರ | ಅನೈತಿಕ ಪೊಲೀಸ್‌ಗಿರಿ ಪ್ರಕರಣ; ಐವರ ಬಂಧನ
Update: 2025-09-21 23:27 IST
ಸಾಂದರ್ಭಿಕ ಚಿತ್ರ
ರಾಮನಗರ : ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿ ಐವರನ್ನು ಕನಕಪುರ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತರನ್ನು ನವಾಝ್, ಕಬೀರ್, ಸುಯೋಲ್, ನಯಾಜ್ ಮತ್ತು ಮಹಿಳೆ ಬಂಧಿತ ಆರೋಪಿಗಳು. ಈ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿತ್ತು.
ಅಕ್ರಮ ಸಂಬಂಧ ಹಿನ್ನೆಲೆ ಎರಡು ಬೇರೆ ಬೇರೆ ಸಮುದಾಯದ ವ್ಯಕ್ತಿ ಹಾಗೂ ಮಹಿಳೆ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಇಂದಿರಾನಗರದಲ್ಲಿ ನಡೆದಿತ್ತು. ಹಲ್ಲೆ ಮಾಡುವುದಲ್ಲದೇ ತಲೆ ಬೋಳಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.