×
Ad

ಭದ್ರಾವತಿ | ಮಹಿಳೆಯ ಕೊಲೆ: ಆರೋಪಿಯ ಬಂಧನ

Update: 2023-09-19 12:42 IST

ಸಾಂದರ್ಭಿಕ ಚಿತ್ರ 

ಶಿವಮೊಗ್ಗ, ಸೆ.19: ನೀಲಗಿರಿ ಮರಗಳನ್ನು ಕಡಿಯುವ ಕೆಲಸಕ್ಕೆ ಬಂದಿದ್ದ ಕಾರ್ಮಿಕ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ ಭರಮ ಸಾಗರದ ರೂಪಾ(30) ಕೊಲೆಯಾದ ಮಹಿಳೆ. ಆಕೆಯ ಸ್ನೇಹಿತ ಸಿಂಗಾರಿ(35) ಎಂಬಾತನೇ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಭದ್ರಾವತಿ ತಾಲೂಕು ಸಂಕ್ಲೀಪುರದಲ್ಲಿ ಎಂಪಿಎಂನ ನೀಲಗಿರಿ ತೋಪಿನಲ್ಲಿ ಮರಗಳ ಕಡಿತಲೆಗೆ ರೂಪಾ ಬಂದಿದ್ದರು. ಇಲ್ಲಿ ಸಿಂಗಾರಿ ಎಂಬಾತನ ಪರಿಚಯವಾಗಿತ್ತು. ರವಿವಾರ ತಡರಾತ್ರಿ ಸಿಂಗಾರಿ ಮತ್ತು ರೂಪಾ ಮಧ್ಯೆ ಯಾವುದೋ ವಿಚಾರದಲ್ಲಿ ಗಲಾಟೆಯಾಗಿದ್ದು, ಈ ವೇಳೆ ಸಿಂಗಾರಿ ಕತ್ತು ಹಿಸುಕಿ ರೂಪಾರನ್ನು ಹತ್ಯೆ ಮಾಡಿದ್ದಾನೆ ಎಂದ ಆರೋಪಿಸಲಾಗಿದೆ. ಆರೋಪಿ ಸಿಂಗಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿವಾಹಿತೆಯಾಗಿರುವ ರೂಪಾ ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಭದ್ರಾವತಿಯಲ್ಲಿ ನೀಲಗಿರಿ ಮರಗಳನ್ನು ಕಡಿಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ರೂಪಾರಿಗೆ ಈ ವೇಳೆ ಸಿಂಗಾರಿಯ ಪರಿಚಯವಾಗಿದ್ದು, ಆತನ ಜೊತೆ ಸಹ ಜೀವನ ನಡೆಸುತ್ತಿದ್ದರೆನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News