ಶಿವಮೊಗ್ಗ: ಯುವಕನಿಗೆ ಚಾಕು ಇರಿತ
Update: 2025-12-22 23:45 IST
ಶಿವಮೊಗ್ಗ: ಯುವಕನೋರ್ವನಿಗೆ ಚಾಕು ಇರಿದಿರುವ ಘಟನೆ ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್‌ನಲ್ಲಿ ಸೋಮವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ.
ಸಯ್ಯದ್ ಬರ್ಕತ್(32) ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದು ಬಂದಿದೆ. ನಗರದ ಲಷ್ಕರ್ ಮೊಹಲ್ಲಾ ನಿವಾಸಿಯಾಗಿದ್ದ ಬರ್ಕತ್ ಮೊಬೈಲ್ ಶಾಪ್ ಇಟ್ಟುಕೊಂಡಿದ್ದರು. ಸೋಮವಾರ ಸಂಜೆ ಕಿಡಿಗೇಡಿಗಳು ಮೊಬೈಲ್ ಶಾಪ್ ಬಳಿಯೇ ಹೋಗಿ ಆತನ ಕೈ, ಹೊಟ್ಟೆಯ ಭಾಗಕ್ಕೆ ಚಾಕು ಇರಿದು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಾಯಗೊಂಡಿದ್ದ ಸಯ್ಯದ್ ಬರ್ಕತ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.