ಶಿವಮೊಗ್ಗ | ಹೊಟೇಲ್ ಕಾರ್ಮಿಕನಿಗೆ ಪಿಎಸ್ಸೈ ಥಳಿತ: ಆರೋಪ
Update: 2025-12-23 00:00 IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ಹೊಟೇಲ್ ಯಾಕೆ ಬಂದ್ ಮಾಡಿಲ್ಲ ಎಂದು ಪ್ರಶ್ನಿಸಿ ಕಾರ್ಮಿಕನೊಬ್ಬನಿಗೆ ಪಿಎಸ್ಸೈಯೊಬ್ಬರು ಥಳಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಹೊಟೇಲ್‌ನಲ್ಲಿ ಈ ಘಟನೆ ನಡೆದಿದ್ದು, ಷಾವಾಸ್(24) ಎಂಬ ಕಾರ್ಮಿಕನ ಮೇಲೆ ದೊಡ್ಡಪೇಟೆಯ ಪಿಎಸ್ಸೈ ನಾರಾಯಣ ಮಧುಗಿರಿ ಥಳಿಸಿರುವ ವೀಡಿಯೊ ವೈರಲ್ ಆಗಿದೆ.
ಪಿಎಸ್ಸೈ ಹಲ್ಲೆ ಮಾಡುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹಲ್ಲೆಗೊಳಗಾಗಿದ್ದ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.