×
Ad

ಶಿವಮೊಗ್ಗ | ವೃದ್ಧೆಯನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ

Update: 2024-06-05 18:44 IST

ಶಿವಮೊಗ್ಗ: ವೃದ್ದೆಯೊಬ್ಬರನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಳ್ಳಿಹಳ್ಳಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಹತ್ಯೆಯಾದ ವೃದ್ದೆಯನ್ನು ಅರಳ್ಳಿಹಳ್ಳಿ ಗ್ರಾಮದ ಫಝಲುನ್ನಿಸಾ(74) ಎಂದು ಗುರುತಿಸಲಾಗಿದೆ. ಹತ್ಯೆಯಾದ ವೃದ್ದೆಯು ಜೂ.3ರ ಬೆಳಗ್ಗೆ ಮನೆ ಬಳಿ ಇರುವ ಕೊಟ್ಟಿಗೆಗೆ ಹಸುವಿಗೆ ಆಹಾರ ನೀಡಲು ತೆರಳಿದ್ದಳು. ಹಸುವಿಗೆ ಆಹಾರ ನೀಡಿ ವಾಪಾಸ್ ಬರುವಾಗ ಅದೇ ಬೀದಿಯ ಮಂಜುನಾಥ್ (45) ಎಂಬಾತ ಕೈಯಲ್ಲಿ ಮಚ್ಚು ಹಿಡಿದುಕೊಂಡು ಹೋಗುತ್ತಿದ್ದನು. ಇದನ್ನು ನೋಡಿದ ಫಝಲುನ್ನಿಸಾ ಯಾಕೆ ಕೈಯಲ್ಲಿ ಮಚ್ಚು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ವಿಚಲಿತನಾದ ಮಂಜುನಾಥ್ ವೃದ್ಧೆಯ ಮೇಲೆ ಕೋಪಗೊಂಡು, ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.

ಮಂಜುನಾಥ್  ದಾಳಿಯಿಂದ ತನ್ನ ಜೀವ ಉಳಿಸಿಕೊಳ್ಳಲು ವೃದ್ಧೆಯು ಯತ್ನಿಸಿ  ಗೀತಮ್ಮ ಎಂಬವರ ಮನೆಯ ಒಳಗೆ ಹೋಗುತ್ತಾರೆ. ಆದರೆ, ಈ ನಡುವೆ ಗೀತಮ್ಮಳ ಮೇಲೆ ಕೂಡ ಮಂಜುನಾಥ್ ಹಲ್ಲೆಗೆ ಮಂದಾಗುತ್ತಾನೆ. ಆಗ  ಗೀತಮ್ಮ ಆತನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗುತ್ತಾರೆ. ಬಳಿಕ ಕೈಗೆ ಸಿಕ್ಕ ವೃದ್ಧೆ ಫಝಲುನ್ನಿಸಾ ಅವರನ್ನು ಮಂಜುನಾಥ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಅಲ್ಲಿಂದ ಮಚ್ಚು ಸಮೇತ ಆತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News