×
Ad

ಶಿವಮೊಗ್ಗ | ಗುಂಡು ತಗಲಿ ಯುವಕ ಮೃತ್ಯು

Update: 2025-05-22 00:03 IST

ಸಾಂದರ್ಭಿಕ ಚಿತ್ರ

ಶಿವಮೊಗ್ಗ : ಬೇಟೆಗೆಂದು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗುಂಡು ತಗಲಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲಿನಲ್ಲಿ ಬುಧವಾರ ವರದಿಯಾಗಿದೆ.

ಗೌತಮ್ (25) ಮೃತಪಟ್ಟ ಯುವಕ.

ತಾಲೂಕಿನ ಬಸವಾನಿ ಸಮೀಪದ ಕೊಳಾವರ ಗ್ರಾಮದ ಯುವಕ ಕಟ್ಟೆಹಕ್ಕಲಿಗೆ ಸ್ನೇಹಿತರ ಜೊತೆಗೆ ಬೇಟೆಗಾಗಿ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News