×
Ad

ಶಿವಮೊಗ್ಗ: ತೋಟಕ್ಕೆ ಉರುಳಿದ ಆಟೋ; ಐದು ಮಂದಿಗೆ ಗಾಯ

Update: 2025-05-05 12:13 IST

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾ ರಸ್ತೆ ಪಕ್ಕದ ತೋಟಕ್ಕೆ ಉರುಳಿದ್ದು, ಐವರು ಗಾಯಗೊಂಡಿರುವ ಘಟನೆ ತಾಲೂಕಿನ ನಿದಿಗೆ ಕೆರೆ ಬಳಿ ಸೋಮವಾರ ಸಂಭವಿಸಿದೆ. 

ಶಿವಮೊಗ್ಗದಿಂದ ಭದ್ರಾವತಿಗೆ ಮದುವೆ ಮನೆಗೆ ಕುಟುಂಬಸ್ಥರು ಆಟದಲ್ಲಿ ತೆರಳುತ್ತಿದ್ದರು. ಈ ವೇಳೆ ನಿದಿಗೆ ಕೆರೆ ಬಳಿ ಚಾಲಕನ‌ ನಿಯಂತ್ರಣ ಕಳೆದುಕೊಂಡ ಆಟೋ ಕೆರೆಯ ವಿರುದ್ಧ ದಿಕ್ಕಿನಲ್ಲಿರುವ ಅಡಿಕೆ ತೋಟಕ್ಕೆ ಉರುಳಿದೆ.

ಸದ್ಯ ಆಟೋ ಚಾಲಕ ಪರಾರಿಯಾಗಿದ್ದಾನೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News