ಶಿವಮೊಗ್ಗ| ಲಾರಿ ಚಾಲಕ, ಕ್ಲೀನರ್‌ಗೆ ಬೆದರಿಸಿ ಮೊಬೈಲ್, ನಗದು ದರೋಡೆ
ಸಾಂದರ್ಭಿಕ ಚಿತ್ರ (Image by jcomp on Freepik)
ಶಿವಮೊಗ್ಗ(ಜ.2): ಬಾಡಿಗೆಗಾಗಿ ಕಾಯುತ್ತ ಲಾರಿಯಲ್ಲೇ ಮಲಗಿದ್ದ ಡ್ರೈವರ್, ಕ್ಲೀನರ್‌ಗೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರವನ್ನು ತೋರಿಸಿ ಬೆದರಿಸಿ ಮೊಬೈಲ್ ಮತ್ತು ನಗದು ದರೋಡೆ ಮಾಡಿಕೊಂಡ ಘಟನೆ ನಗರದ ಸಾಗರ ರಸ್ತೆಯಲ್ಲಿ ನಡೆದಿದೆ.
ಮೈಸೂರು ಮೂಲದ ಲಾರಿ ಚಾಲಕ ಚಂದ್ರಶೇಖರ ಮತ್ತು ಕ್ಲೀನರ್ ಹಿತೇಶ್ ನಾಯಕ ಎಂಬವರನ್ನು ಬೆದರಿಸಿ ದರೋಡೆ ಮಾಡಲಾಗಿದೆ.
ಇಬ್ಬರೂ ಬಾಡಿಗೆಗಾಗಿ ಶಿವಮೊಗ್ಗದ ಸಾಗರ ರಸ್ತೆಯಲ್ಲಿ ಲಾರಿ ನಿಲ್ಲಿಸಿದ್ದರು. ಬೆಳಗಿನ ಜಾವ 4.30ರ ವೇಳೆ ಲಾರಿಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಲಾಂಗ್ ತೋರಿಸಿ ಬೆದರಿಸಿ ಡ್ರೈವರ್ ಮತ್ತು ಕ್ಲೀನರ್ ಬಳಿ ಇದ್ದ ಮೊಬೈಲ್ ಮತ್ತು ನಗದು ದರೋಡೆ ಮಾಡಿದ್ದಾರೆ. ಲಾರಿಯಲ್ಲಿದ್ದ ಬಾಡಿಗೆ ಹಣ 20,000ರೂ, ಕ್ಲೀನರ್ ಹಿತೇಶ್ ನಾಯಕ ಬಳಿ ಇದ್ದ ಮೊಬೈಲ್ ಫೋನ್ ಕಸಿದುಕೊಂಡು ದುಷ್ಕರ್ಮಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.