SBI ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
photo: India Today
SBI ಆಫೀಸರ್ ಹಂತದ 996 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ಅಧಿಕೃತ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ವೈಸ್ ಪ್ರೆಸಿಡೆಂಟ್ ವೆಲ್ತ್ (SRM), ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ವೆಲ್ತ್ (RM), ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.
ಒಟ್ಟು 996 ಹುದ್ದೆಗಳಿಗೆ ಈ ನೇಮಕಾತಿ ಪ್ರಕಟವಾಗಿದ್ದು, SBI SO ನೇಮಕಾತಿ 2025 ಗಾಗಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಡಿಸೆಂಬರ್ 2, 2025 ರಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳು ಡಿಸೆಂಬರ್ 23, 2025 ರವರೆಗೆ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.
ವಯೋಮಿತಿ
ಕನಿಷ್ಠ: 20 ವರ್ಷ
ಗರಿಷ್ಠ: 45 ವರ್ಷ (01 ಮೇ 2025ರಂತೆ)
ಆನ್ಲೈನ್ ಅರ್ಜಿ ಮಾಹಿತಿಗಳು
ಅರ್ಜಿ ಸಲ್ಲಿಕೆ ಪ್ರಾರಂಭ: 02 ಡಿಸೆಂಬರ್ 2025
ಕೊನೆಯ ದಿನಾಂಕ: 23 ಡಿಸೆಂಬರ್ 2025
ಶುಲ್ಕ ಪಾವತಿ ಕೊನೆಯ ದಿನ: 23 ಡಿಸೆಂಬರ್ 2025
ಪರೀಕ್ಷೆಯ ದಿನಾಂಕ: ಶೀಘ್ರದಲ್ಲೇ ತಿಳಿಸಲಾಗುವುದು
ಅಡ್ಮಿಟ್ ಕಾರ್ಡ್: ಪರೀಕ್ಷೆಗೆ ಮೊದಲು ನೀಡಲಾಗುವುದು
ಫಲಿತಾಂಶ: ಶೀಘ್ರದಲ್ಲೇ ತಿಳಿಸಲಾಗುವುದು
ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್: 750ರೂ.
ಎಸ್ಸಿ/ಎಸ್ಟಿ/ಪಿಎಚ್: ಶುಲ್ಕವಿಲ್ಲ
ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, IMPS, ಕ್ಯಾಶ್ ಕಾರ್ಡ್/ಮೊಬೈಲ್ ವ್ಯಾಲೆಟ್
ಅರ್ಹತೆ
ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪದವಿ.
ಹುದ್ದೆಗಳ ವಿವರ
ವೈಸ್ ಪ್ರೆಸಿಡೆಂಟ್ ವೆಲ್ತ್ (Senior Relationship Manager): 506 ಹುದ್ದೆಗಳು
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ವೆಲ್ತ್ (Senior Relationship Manager): 206 ಹುದ್ದೆಗಳು
ಕಸ್ಟಮರ್ ರಿಲೇಶನ್‌ಶಿಪ್ ಎಕ್ಸಿಕ್ಯೂಟಿವ್: 284 ಹುದ್ದೆಗಳು
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು SBI ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು ಅಥವಾ
https://www.sarkariexam.com/sbi-bank-so-recruitment-2025/
ಈ ಲಿಂಕ್‌ಗೆ ಭೇಟಿ ನೀಡಬಹುದು.