×
Ad

ನೆಮ್ಮದಿ ಕಸಿದ ಕುಸಿಯುತ್ತಿರುವ ರೂಪಾಯಿ ಮೌಲ್ಯ; ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಜೀವನ ವೆಚ್ಚ ದುಬಾರಿ!

ಬುಧವಾರ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 90ರ ಗಡಿದಾಟಿ ಕುಸಿದಿದೆ. ಕಳೆದ ಎಂಟು ತಿಂಗಳಲ್ಲಿ ರೂಪಾಯಿ ಮೌಲ್ಯ ರೂ 84ರಿಂದ ರೂ 90.12ಕ್ಕೆ ಕುಸಿದಿದೆ. ಅಂದರೆ ಶೇ 7ರಷ್ಟು ಕುಸಿದಿದೆ. ರಫ್ತು ಅಗ್ಗವಾಗಿದ್ದರೂ ದುರ್ಬಲ ರೂಪಾಯಿ ಕಚ್ಚಾ ತೈಲದಿಂದ ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವನ್ನೂ ದುಬಾರಿಯನ್ನಾಗಿ ಮಾಡುತ್ತದೆ. ಹೆಚ್ಚು ಪರಿಣಾಮ ಬೀರುವ ವಲಯದಲ್ಲಿ ವಿದೇಶಿ ಶಿಕ್ಷಣವೂ ಸೇರಿದೆ.

Update: 2025-12-03 22:56 IST

Photo: indiatoday

ಬುಧವಾರ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 90ರ ಗಡಿದಾಟಿ ಕುಸಿದಿದೆ. ಕಳೆದ ಎಂಟು ತಿಂಗಳಲ್ಲಿ ರೂಪಾಯಿ ಮೌಲ್ಯ ರೂ 84ರಿಂದ ರೂ 90.12ಕ್ಕೆ ಕುಸಿದಿದೆ. ಅಂದರೆ ಶೇ 7ರಷ್ಟು ಕುಸಿದಿದೆ. ರಫ್ತು ಅಗ್ಗವಾಗಿದ್ದರೂ ದುರ್ಬಲ ರೂಪಾಯಿ ಕಚ್ಚಾ ತೈಲದಿಂದ ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವನ್ನೂ ದುಬಾರಿಯನ್ನಾಗಿ ಮಾಡುತ್ತದೆ. ಹೆಚ್ಚು ಪರಿಣಾಮ ಬೀರುವ ವಲಯದಲ್ಲಿ ವಿದೇಶಿ ಶಿಕ್ಷಣವೂ ಸೇರಿದೆ.

ವ್ಯಾಪಾರ ಅಥವಾ ರಫ್ತು ಹೊರತುಪಡಿಸಿ ರೂಪಾಯಿ ಕುಸಿತವು ವಿದೇಶದಲ್ಲಿ ಕಲಿಯುತ್ತಿರುವ ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ. ರೂಪಾಯಿ ಲೆಕ್ಕದಲ್ಲಿ ಶುಲ್ಕಗಳು ಹೆಚ್ಚಾದಂತೆ, ಶಿಕ್ಷಣ ಸಾಲಗಳು ಹೆಚ್ಚಾಗುತ್ತಿವೆ. ಕಳೆದ ಎಂಟು ತಿಂಗಳಲ್ಲಿ ರೂಪಾಯಿ ಮೌಲ್ಯ ರೂ 84ರಿಂದ ರೂ 90.12ಕ್ಕೆ ಕುಸಿದಿದೆ. ಅಂದರೆ ಶೇ 7ರಷ್ಟು ಕುಸಿದಿದೆ. ಭಾರತದಲ್ಲಿ ನೆಲೆಸಿರುವ ಕುಟುಂಬಗಳು ಅಮೆರಿಕ, ಕೆನಡಾ, ಇಟಲಿ, ಜರ್ಮನಿ, ಸಿಂಗಾಪುರ ಮತ್ತು ಯುಕೆಯಲ್ಲಿ ನೆಲೆಸಿರುವ ವಿದ್ಯಾರ್ಥಿಗಳಿಗಾಗಿ ಡಾಲರ್ ಲೆಕ್ಕದಲ್ಲಿ ಹೆಚ್ಚು ಖರ್ಚು ಮಾಡಬೇಕಾಗಿ ಬಂದಿದೆ.

90ರ ಗಡಿ ದಾಟಿದ ರೂಪಾಯಿ ಕುಸಿತ

ಬುಧವಾರ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ 90ರ ಗಡಿದಾಟಿ ಕುಸಿದಿದೆ. ರಫ್ತು ಅಗ್ಗವಾಗಿದ್ದರೂ ದುರ್ಬಲ ರೂಪಾಯಿ ಕಚ್ಚಾ ತೈಲದಿಂದ ಎಲೆಕ್ಟ್ರಾನಿಕ್ಸ್ ವರೆಗೆ ಎಲ್ಲವನ್ನೂ ದುಬಾರಿಯನ್ನಾಗಿ ಮಾಡುತ್ತದೆ. ಹೆಚ್ಚು ಪರಿಣಾಮ ಬೀರುವ ವಲಯದಲ್ಲಿ ವಿದೇಶಿ ಶಿಕ್ಷಣವೂ ಸೇರಿದೆ. ರೂಪಾಯಿ ಕುಸಿತದಿಂದ ವಿದ್ಯಾರ್ಥಿಗಳ ಜೀವನ ವೆಚ್ಚ, ವಾರ್ಷಿಕ ಬೋಧನಾ ಶುಲ್ಕಗಳಲ್ಲಿ ಲಕ್ಷಗಟ್ಟಲೆ ಏರುಪೇರಾಗಬಹುದು. ಶಿಕ್ಷಣ ಸಾಲಗಳು ಗಣನೀಯವಾಗಿ ಏರುತ್ತವೆ.

ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ

ಭಾರತೀಯ ಶಿಕ್ಷಣ ಸಚಿವಾಲಯದ ವಲಸೆ ಮಂಡಳಿಯ ಅಂಕಿಅಂಶಗಳ ಪ್ರಕಾರ 2024ರಲ್ಲಿ 7.6 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ವಿದೇಶಿ ಅಧ್ಯಯನ ಮಾಡುವ ಭಾರತೀಯರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. 2020ರ ಕೋವಿಡ್ ವರ್ಷದ 2.6 ಲಕ್ಷ ವಿದ್ಯಾರ್ಥಿಗಳು ವಿದೇಶಿ ಅಧ್ಯಯನಕ್ಕೆ ಹೋಗಿರುವ ಕನಿಷ್ಠ ಪ್ರಮಾಣವನ್ನು ಹೊರತುಪಡಿಸಿದರೆ, 2023ರಲ್ಲಿ 8.95 ಲಕ್ಷಕ್ಕೂ ಹೆಚ್ಚು ಭಾರತೀಯರು ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗಿದ್ದಾರೆ.

*ಮಧ್ಯಮವರ್ಗದ ಕುಟುಂಬಗಳ ವಿದ್ಯಾರ್ಥಿಗಳು

ಬಹುತೇಕ ಅಂಕಿಅಂಶಗಳು ತಿಳಿಸುವ ಪ್ರಕಾರ ಮಧ್ಯಮ ವರ್ಗದ ಕುಟುಂಬಗಳಿಂದ ವಿದೇಶಕ್ಕೆ ವಿದ್ಯಾಭ್ಯಾಸಕ್ಕಾಗಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಹೀಗೆ ಮಧ್ಯಮ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿ ವಿದೇಶಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನಗಳು, ಹಣಕಾಸಿನ ನೆರವು ಅಥವಾ ಶಿಕ್ಷಣ ಸಾಲಗಳನ್ನು ಅವಲಂಬಿಸಿರುತ್ತಾರೆ.

ಇದೀಗ ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಳ್ಳುತ್ತಾ ಹೋಗುತ್ತಿರುವುದು ವಿದೇಶದಲ್ಲಿ ಕಡಿಮೆ ಬಜೆಟ್ ನಲ್ಲಿ ನೆಲೆಸುವ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದೆ. ಅವರ ಜೀವನಕ್ಕಾಗಿ ಹಣ ಕಳುಹಿಸಬೇಕಾದ ಪೋಷಕರ ಮೇಲೂ ಹೊರೆ ಬೀಳುತ್ತಿದೆ.

ಸರ್ವಿಸ್ ಆಗಿರುವ ವಿದೇಶಿ ಶಿಕ್ಷಣ

ಆರ್ಥಿಕವಾಗಿ ನೋಡುವುದಾದರೆ ವಿದೇಶಿ ಶಿಕ್ಷಣವನ್ನು ಸರ್ವಿಸ್ ಎಂದೇ ಪರಿಗಣಿಸಲಾಗುತ್ತದೆ. ಶಿಕ್ಷಣದ ಖರೀದಿ, ಭರ್ತಿ, ವೀಸಾಗಳು, ವಸತಿ, ಸಲಹೆಗಳು ಅಥವಾ ಅನುಭವ ಎಲ್ಲವನ್ನೂ ವಾಣಿಜ್ಯ ಸೇವೆಗಳಾಗಿ ನೋಡಲಾಗುತ್ತಿದೆ.

ರೂಪಾಯಿ ಬೆಲೆ ಕುಸಿದಾಗ ಭಾರತೀಯರು ಅದೇ 1 ಡಾಲರ್ ಮೌಲ್ಯದ ಆಮದಿಗೆ ಹೆಚ್ಚು ರೂಪಾಯಿಗಳನ್ನು ತೆರಬೇಕಾಗುತ್ತದೆ. ಹೀಗಾಗಿ ವಿದೇಶಿ ಶಿಕ್ಷಣ ಹೆಚ್ಚು ದುಬಾರಿಯಾಗಿಬಿಡುತ್ತದೆ.

*ದುಬಾರಿಯಾದ ಶುಲ್ಕಗಳು

ಡಾಲರ್ ವಿರುದ್ಧ ರೂಪಾಯಿ ದುರ್ಬಲಗೊಂಡಿರುವುದರಿಂದ ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಅದೇ ರೀತಿ, ಶುಲ್ಕಗಳು ಮತ್ತು ಜೀವನ ವೆಚ್ಚ ಡಾಲರ್ ಗೆ ನಿಕಟವಾಗಿ ಸಂಬಂಧಿಸಿರುವುದರಿಂದ ಕೆನಡಾ, ಆಸ್ಟ್ರೇಲಿಯ ಮತ್ತು ಯುಕೆಯಲ್ಲಿ ಅಧ್ಯಯನ ನಡೆಸುವವರ ಮೇಲೂ ಪರಿಣಾಮ ಬೀರುತ್ತದೆ. ಯೂರೋವಲಯದಲ್ಲಿ ಓದುತ್ತಿರುವವರಿಗೂ ಅಧ್ಯಯನ ದುಬಾರಿಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!

ಓ ಮೆಣಸೇ...!