×
Ad

FIFA 2026 | ಸ್ಪೇನ್ ವಿರುದ್ಧ ಮಂಕಾದ ಎಂಬಾಪೆ: ಒಟ್ಟು ಪಡೆದದ್ದು ಕೇವಲ 34 ಟಚ್‌ಗಳು ಮಾತ್ರ !

Update: 2026-07-15 09:36 IST

Photo credit : NDTV

ಡಲ್ಲಾಸ್: ಫಿಫಾ ವಿಶ್ವಕಪ್ ನ ಮೊದಲ ಸೆಮಿಫೈನಲ್ ನಲ್ಲಿ ಸ್ಪೇನ್ ವಿರುದ್ಧ 2-0 ಅಂತರದಿಂದ ಸೋಲುವ ಮೂಲಕ ಎರಡು ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡಕ್ಕೆ ಮತ್ತೊಮ್ಮೆ ನಿರಾಶೆಯಾಗಿದೆ. ಎಂಬಾಪೆ, ಉಸ್ಮಾನ್ ಡೆಂಬೆಲೆ, ಮೈಕೆಲ್ ಒಲಿಸ್ ಮತ್ತು ಬ್ರಾಡ್ಲಿ ಬಾರ್ಕೋಲಾ ಅವರನ್ನೊಳಗೊಂಡ ಫ್ರಾನ್ಸ್ ನ ಬಲಿಷ್ಠ ಆಕ್ರಮಣಕಾರಿ ಪಡೆಯನ್ನು ಸ್ಪೇನ್ ನ ರಕ್ಷಣಾ ವಿಭಾಗ ಪಂದ್ಯದುದ್ದಕ್ಕೂ ಸಂಪೂರ್ಣವಾಗಿ ಕಟ್ಟಿಹಾಕುವ ಮೂಲಕ ಫ್ರಾನ್ಸ್ ತಂಡಕ್ಕೆ ಆಘಾತ ನೀಡಿತು.

ನಾಲ್ಕು ವರ್ಷಗಳ ಹಿಂದೆ ಖತರ್ ನಲ್ಲಿ ನಡೆದ ಫೈನಲ್ ನಲ್ಲಿ ಎಂಬಾಪೆ ಹ್ಯಾಟ್ರಿಕ್ ಗೋಲು ಗಳಿಸಿದ ಹೊರತಾಗಿಯೂ ಫ್ರಾನ್ಸ್ ತಂಡ ಅರ್ಜೆಂಟೀನಾ ವಿರುದ್ಧ ಪೆನಾಲ್ಟಿಯಲ್ಲಿ ಸೋತಿತ್ತು. ಆದರೆ, ಈ ಬಾರಿ ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್ ತಂಡ ನಿರೀಕ್ಷೆಯಂತೆ ಆಡಲು ಸಾಧ್ಯವಾಗಲಿಲ್ಲ. ಎಂಬಾಪೆಯನ್ನೊಳಗೊಂಡ ಬಲಿಷ್ಠ ಆಕ್ರಮಣಕಾರಿ ಪಡೆಗೆ ಚೆಂಡನ್ನು ಸ್ಪರ್ಶಿಸುವ ಅವಕಾಶವನ್ನೇ ಸ್ಪೇನ್ ತಂಡ ನೀಡಲಿಲ್ಲ .

ಪಂದ್ಯದ ಮೊದಲಾರ್ಧದಲ್ಲಿ ಎಂಬಾಪೆ ಕೇವಲ 14 ಬಾರಿ ಮಾತ್ರ ಚೆಂಡನ್ನು ಸ್ಪರ್ಶಿಸಿದ್ದರು. ಪಂದ್ಯ ಮುಗಿಯುವಷ್ಟರಲ್ಲಿ ಅವರು ಒಟ್ಟು ಪಡೆದದ್ದು ಕೇವಲ 34 ಟಚ್ ಗಳನ್ನು ಮಾತ್ರ. ಇಡೀ ಪಂದ್ಯದಲ್ಲಿ ಎಂಬಾಪೆ 3 ಬಾರಿ ಗೋಲು ಬಾರಿಸುವ ಪ್ರಯತ್ನ ನಡೆಸಿದರಾದರೂ, ಸ್ಪೇನ್ ಗೋಲ್ ಕೀಪರ್ ಉನೈ ಸೀಮನ್ ರಿಗೆ ಯಾವುದೇ ಕಠಿಣ ಸವಾಲು ನೀಡುವ ಹೊಡೆತ ಗಳು ಅವರಿಂದ ಬಂದಿಲ್ಲ.

ಇದರ ಜೊತೆಗೆ, ಎಂಬಾಪೆ 14 ಬಾರಿ ಚೆಂಡಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡರು. ಫ್ರಾನ್ಸ್ ತಂಡದ ನಾಯಕನಿಗಿಂತ ಹೆಚ್ಚು ಬಾರಿ ಚೆಂಡನ್ನು ಕಳೆದುಕೊಂಡವರೆಂದರೆ ಉಸ್ಮಾನ್ ಡೆಂಬೆಲೆ, ಲಮೈನ್ ಯಮಾಲ್ (ತಲಾ 17 ಬಾರಿ) ಮತ್ತು ಮೈಕೆಲ್ ಒಲಿಸ್ (20 ಬಾರಿ) . ಅಂದರೆ ಒಟ್ಟು ಸ್ಟೈಕರ್ ಗಳು ತಮ್ಮಲ್ಲಿ ಚೆಂಡನ್ನು ಉಳಿಸುಕೊಳ್ಳುವಲ್ಲಿ ವಿಫಲರಾಗಿದ್ದರು.

ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ಫ್ರಾನ್ಸ್ ತಂಡವು ಈ ಪಂದ್ಯದಲ್ಲಿ ಕೇವಲ 0.3 ರಷ್ಟು ಗೋಲು ನಿರೀಕ್ಷಿತ ಗುರಿಗಳನ್ನು ಹೊಂದಿತ್ತು. ವಿಶೇಷವೆಂದರೆ, ಇದರಲ್ಲಿ ಮೂರನೇ ಎರಡರಷ್ಟು ಪಾಲು ಎಂಬಾಪೆ ಅವರ ಪ್ರಯತ್ನಗಳಿಂದಲೇ ಬಂದದ್ದಾಗಿತ್ತು.

ಸೆಮಿಫೈನಲ್ಗೂ ಮುನ್ನ ಫ್ರಾನ್ಸ್ ತಂಡವು 16 ಗೋಲುಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ಗೋಲು ಬಾರಿಸಿದ ತಂಡವಾಗಿತ್ತು. ಅರ್ಜೆಂಟೀನಾಕ್ಕಿಂತ ಕೇವಲ ಒಂದು ಗೋಲು ಮುನ್ನಡೆಯಿಂದ ಮೊದಲ ಸ್ಥಾನದಲ್ಲಿದೆ.

ಸ್ಪೇನ್ ವಿರುದ್ಧ ಎಂಬಾಪೆ ಗುರಿಯತ್ತ ಶಾಟ್ ಬಾರಿಸಲು ವಿಫಲರಾಗಿದ್ದರೂ ಸಹ, ಫ್ರಾನ್ಸ್ ತಂಡದ ಏಕೈಕ ಆಪತ್ಬಾಂಧವನಂತೆ ಕಂಡರು. ಏಕೆಂದರೆ ಅವರ ಸಹ ಆಟಗಾರರಾದ ಡೆಂಬೆಲೆ, ಒಲಿಸ್ ಮತ್ತು ಬಾರ್ಕೋಲಾ ಅವರ ಪ್ರದರ್ಶನವು ಅತ್ಯಂತ ಕಳಪೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News