ಬ್ಯಾಡ್ಮಿಂಟನ್ ಹಬ್ಬ; ಟೀಕಾಕಾರರ ಬಾಯಿ ಮುಚ್ಚಿಸಿದ ದೆಹಲಿಯ BWF ವಿಶ್ವಚಾಂಪಿಯನ್ಶಿಪ್ ಸಾಹಸ
Photo Credit : India Today/PTI
ಶನಿವಾರ ಸೆಮಿಫೈನಲ್ ನೋಡಲು ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ 8000ಕ್ಕೂ ಅಧಿಕ ಮಂದಿ ಆಗಮಿಸುವ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಹಬ್ಬದ ವಾತಾವರಣವಾಗಿ ಬದಲಾಗಿತ್ತು.
ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಿಶ್ವ ಬ್ಯಾಡ್ಮಿಂಟನ್ ರಂಗದ ರಾಣಿಯಾಗಿರುವ ಆನ್ ಸೆ ಯಂಗ್ ಅಭಿಮಾನಿಗಳು ತುಂಬಿದ್ದರು. ವಿಶ್ವದ ನಂಬರ್ 1 ಮಹಿಳಾ ಸಿಂಗಲ್ಸ್ ಶಟ್ಲರ್ ಮತ್ತು ಸರ್ಕ್ಯೂಟ್ನ ದೊಡ್ಡ ಹೆಸರುಗಳಲ್ಲಿ ಒಬ್ಬರಾಗಿರುವ ಆನ್ ಸೆ ಯಂಗ್ ಬ್ಯಾಡ್ಮಿಂಟನ್ ಕೋರ್ಟ್ಗೆ ಆಗಮಿಸುವ ಸುರಂಗದ ಪ್ರವೇಶವಾದ ಇಂಡಿಯಾ ಗೇಟ್ನ ಪ್ರತಿಕೃತಿಯ ಮೂಲಕ ಹಾದು ಹೋಗುವಾಗ ಸ್ವಾಗತಕ್ಕಾಗಿ ಅಭಿಮಾನಿಗಳು ಓಡಿ ಹೋದರು. ಒಬ್ಬ ಯುವತಿ “ಆಲ್ ದಿ ಬೆಸ್ಟ್ ಫಾರ್ ಟುಮಾರೊ, ಆನ್ ಸೆ ಯಂಗ್” (ನಾಳೆಗೆ ಶುಭವಾಗಲಿ) ಎಂಬ ಪ್ಲೆಕಾರ್ಡ್ ಹಿಡಿದರೆ, ಮತ್ತೊಬ್ಬ ಯುವತಿ “ಆನ್ ಸೆ ಯಂಗ್ ರೂಲ್ಸ್” ಎನ್ನುವ ಪ್ಲೇ ಕಾರ್ಡ್ ಹಿಡಿದಿದ್ದರು. ಅವರು ಮೊತ್ತ ಮೊದಲ ಬಾರಿಗೆ ತಮ್ಮ ಆದರ್ಶ ಆಟಗಾತಿಯನ್ನು ನೋಡುತ್ತಿದ್ದರು. ಆನ್ ಕೂಡ ಇದನ್ನು ಇಷ್ಟಪಟ್ಟರು.
ಆನ್ ಅವರು ಸೆಮಿಫೈನಲ್ನಲ್ಲಿ ವಿಶ್ವ ನಂಬರ್ 2 ವಾಂಗ್ ಝಿ ಯಿ ಅವರನ್ನು ಒಂದು ಗಂಟೆ ಒಂದು ನಿಮಿಷದಲ್ಲಿ ಸೋಲಿಸಿ ಫೈನಲ್ಗೆ ಸಾಗಿದ್ದಾರೆ. ವಾಂಗ್ ಝಿ ಯಿ 16ನೇ ಘಟ್ಟದಲ್ಲಿ ಪಿ ವಿ ಸಿಂಧುರನ್ನು ಸೋಲಿಸಿದ ಕಾರಣವೂ ಅಭಿಮಾನಿಗಳು ಕೊರಿಯನ್ ಆಟಗಾತಿಯ ಪರವಾಗಿದ್ದರು.
ಕಳೆದ ಕೆಲವು ವರ್ಷಗಳಿಂದ ಒಲಿಂಪಿಕ್ ಚಾಂಪಿಯನ್ ಆಗಿರುವ ಆನ್ ಸೆ ಯಂಗ್ ಬ್ಯಾಡ್ಮಿಂಟನ್ನ ನಿರ್ವಿವಾದ ರಾಣಿಯಾಗಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ಸೇರಿದಂತೆ ಮೂರು ಬಾರಿ ಇಂಡಿಯಾ ಓಪನ್ ಗೆದ್ದಿದ್ದಾರೆ ಮತ್ತು ಭಾರತದಲ್ಲಿ ನಡೆದ ಸಂಪೂರ್ಣ ಪಂದ್ಯಾವಳಿಯಲ್ಲಿ ಒಂದನ್ನೂ ಸೋತಿಲ್ಲ. ಆದರೆ ಶನಿವಾರದ ಸೆಮಿಫೈನಲ್ ಭಿನ್ನವಾಗಿತ್ತು. ಅವರು ಮೊದಲ ಬಾರಿಗೆ ಜನತುಂಬಿದ ಸಭಾಂಗಣದಲ್ಲಿ ಆಡಿದ್ದರು. ಇದೊಂದು ಹಬ್ಬದ ರೀತಿಯಲ್ಲಿ ಮುಗಿದು ಹೋಗಿತ್ತು. ಬ್ಯಾಡ್ಮಿಂಟನ್ ಆಡುವ ಯಾವುದೇ ದೇಶದಲ್ಲಿ ಕಾಣುವ ಜನಸಂದಣಿಗಿಂತ ಭಿನ್ನವಾಗಿತ್ತು ಮತ್ತು ಆನ್ ಬಾವುಕರಾದರು.
ಸೆಮಿಫೈನಲ್ನಲ್ಲಿ ಕೊನೆಯ ಪಾಯಿಂಟ್ ಗೆದ್ದ ನಂತರ ಸ್ಟ್ಯಾಂಡ್ನತ್ತ ಸಾಗಿ ಕೈಬೀಸಿ ನಮಸ್ಕರಿಸಿ ತಮ್ಮ ಹೆಸರನ್ನು ಉಚ್ಛರಿಸುತ್ತಿದ್ದವರ ಅಭಿನಂದನೆಗಳನ್ನು ಸ್ವೀಕರಿಸಿದರು. ಅಂತಿಮವಾಗಿ ಜನಸಂದಣಿಯ ಒಂದು ಭಾಗದ ಕಡೆಗೆ ಓಡಿ ತಮ್ಮ ಪ್ರಸಿದ್ಧ ‘ರ‍್ಯಾಂಬೋ ಬಂದಾನ’ (ತಲೆಗೆ ಕಟ್ಟುವ ಪಟ್ಟಿ) ಬಿಚ್ಚಿ ಪ್ರೇಕ್ಷಕರೆಡೆಗೆ ಎಸೆದರು.
ಅದಕ್ಕೆ ಮೊದಲು ಮುಖ್ಯ ಗ್ಯಾಲರಿ ಜನರಿಂದ ತುಂಬಿ ತುಳುಕುತ್ತಿತ್ತು. “ಭಾರತ್ ಮಾತಾ ಕಿ ಜೈ” ಎನ್ನುವ ಕೂಗು ಕೇಳಿಬರುತ್ತಿತ್ತು. ಅದು ಭಾರತದ ಬ್ಯಾಡ್ಮಿಂಟ್ನ ದೊಡ್ಡ ಹೆಸರು ಪಿವಿ ಸಿಂಧುಗೆ ಆಗಿರಲಿಲ್ಲ. ಅಥವಾ ಅತ್ಯುತ್ತಮ ಜನಸಂದಣಿಯನ್ನು ಸ್ಟಾಂಡ್ಗೆ ತರುವ ಸೂಪರ್ ಸ್ಟಾರ್ ಲಕ್ಷ್ಯ ಸೇನ್ ಗೂ ಆಗಿರಲಿಲ್ಲ. ಬದಲಿಗೆ ಮಹಿಳಾ ಡಬಲ್ಸ್ ಆಟಗಾತಿಯರಾದ ಗಾಯತ್ರಿ ಗೋಪಿಚಂದ್ ಮತ್ತು ಟ್ರೀಸಾ ಜಾಲಿ ಜೋಡಿಗೆ ಇಂತಹ ಕೂಗು ಕೇಳಿ ಬಂದಿತ್ತು.
ವಾರಾಂತ್ಯದ 16ನೇ ಘಟ್ಟದ ಪಂದ್ಯವನ್ನು ಗೆದ್ದು ಸೆಮಿಫೈನಲ್ಗೆ ಆಗಮಿಸಿದ ಡಬಲ್ಸ್ ಜೋಡಿ ರಾಷ್ಟ್ರ ರಾಜಧಾನಿಯಲ್ಲಿ ಗೆದ್ದಿತ್ತು. ಸಿಂಧು, ಲಕ್ಷ್ಯ ಮತ್ತು ಸಾತ್ವಿಕ್-ಚಿರಾಗ್ ಜೋಡಿ ಪ್ರವೇಶಿಸಲು ವಿಫಲವಾದ 8ರ ಘಟ್ಟವನ್ನು ಗಾಯತ್ರಿ ಮತ್ತು ಟ್ರೀಸಾ ಜೋಡಿ ತಲುಪಿತ್ತು. 17 ವರ್ಷಗಳ ನಂತರ ಭಾರತ ಆಯೋಜಿಸಿದ ಮೊದಲ ವಿಶ್ವ ಚಾಂಪಿಯನ್ಶಿಪ್ನಲ್ಲಿ ತವರು ಪ್ರೇಕ್ಷಕರೆದರು ಸೆಮಿಫೈನಲ್ ತಲುಪಿ ಒಂದು ಪದಕವನ್ನಾದರೂ ಭಾರತದ ಹೆಸರಿಗೆ ಬರೆದರು. ಮೊದಲ ದಿನದಂದು ವಿಶ್ವ್ ನಂಬರ್ 1 ಶಿ ಯುಕಿಯನ್ನು ಬೆರಗುಗೊಳಿಸಿ ಸೋಲಿಸಿದ ಆಯುಷ್ ಶೆಟ್ಟಿ ಮತ್ತು ಉನ್ನತಿ ಹೂಡಾ ಅವರೂ ಉತ್ತಮ ಪ್ರದರ್ಶನ ನೀಡಿದರು. ಆದರೆ ಪ್ರಶಸ್ತಿ ವೇದಿಕೆ ಹತ್ತುವ ಅವಕಾಶ ಮಹಿಳಾ ಡಬಲ್ಸ್ ಜೋಡಿಗೆ ಮಾತ್ರ ದೊರೆತಿದೆ.
ಶನಿವಾರ ಗಾಯತ್ರಿ ಮತ್ತು ಟ್ರೀಸಾ ತುಂಬಿದ ಅಭಿಮಾನಿಗಳ ಮುಂದೆ ಅದ್ಭುತ ಪ್ರದರ್ಶನ ನೀಡುವ ಮೊದಲು ಗುರುವಾರ ಏಳನೇ ಶ್ರೇಯಾಂಕದ ರಿನ್ ಇವಾನಾಗಾ ಮತ್ತು ಕೀ ನಕಾನಿಶಿ ಅವರನ್ನು ಸೋಲಿಸಿದ್ದರು. ಶುಕ್ರವಾರ ಮೂರು ಪಂದ್ಯಗಳ ಹೋರಾಟದಲ್ಲಿ ನಾಲ್ಕನೇ ಶ್ರೇಯಾಂಕದ ಜಿಯಾ ಯಿಫಾನ್ ಮತ್ತು ಜಾಂಗ್ ಶು ಕ್ಸಿಯಾನ್ ಅವರನ್ನು ಸೋಲಿಸಿ ದೊಡ್ಡ ಆಘಾತ ನೀಡಿದ್ದರು. ನಂತರ ವಿಶ್ವ ನಂಬರ್ 1 ಜೋಡಿ ಲಿಯು ಶೆಂಕಗ್ ಶು ಮತ್ತು ಟಾನ್ ನಿಂಗ್ ವಿರುದ್ಧ ಸೆಮಿಫೈನಲ್ ಹೋರಾಟ ಸುಲಭದ ಸೋಲಾಗಿರಲಿಲ್ಲ. ಭಾರತೀಯ ಜೋಡಿ ಗೆಲ್ಲುವ ಸಾಧ್ಯತೆ ಕಡಿಮೆ ಇತ್ತು. ಹಾಗಿದ್ದರೂ 8000 ಮಂದಿ ಅಭಿಮಾನಿಗಳು ಪಂದ್ಯ ನೋಡಲು ಸೇರಿದ್ದರು. ಆರಂಭಿಕ ಪಂದ್ಯವನ್ನು 21-18ರಿಂದ ಗೆದ್ದರೂ ನಂತರ 15-18ರಿಂದ ಹಿಮ್ಮೆಟ್ಟಿದರು. ಇದು ಭಾರತ ಕಂಡು ಅತ್ಯಂತ ಅತಿ ಅಬ್ಬರದ ಪಂದ್ಯವಾಗಿತ್ತು.
ಜನಸಂದಣಿ ಕೇವಲ ಭಾರತದ ದೊಡ್ಡ ಹೆಸರುಗಳಿಗಾಗಿ ಸೇರಿರಲಿಲ್ಲ. ಪುರುಷರ ಸಿಂಗಲ್ಸ್ನಲ್ಲಿ ಕೆನಡಾದ ವಿಕ್ಟರ್ ಲೈ ಮತ್ತು ಫ್ರಾನ್ಸ್ನ ಅಲೆಕ್ಸ್ ಲ್ಯಾನಿಯರ್ ಪ್ರೇಕ್ಷಕರ ನೆಚ್ಚಿನ ಆಟಗಾರರಾದರು. ರಾಷ್ಟ್ರೀಯ ಆಟಗಾರರು ಮಾತ್ರವಲ್ಲ. ಎಲ್ಲಾ ಬ್ಯಾಡ್ಮಿಂಟನ್ ಚಾಂಪಿಯನ್ಗಳಿಗೂ ಜನರು ಅಭಿನಂದಿಸಿದರು.
ವಿಶ್ವ ಚಾಂಪಿಯನ್ಶಿಪ್ ಪ್ರಾರಂಭವಾಗುವ ಮೊದಲು ದೆಹಲಿ ಉತ್ತಮ ಪ್ರದರ್ಶನ ನೀಡಬಹುದೇ ಎಂಬ ಬಗ್ಗೆ ಸಂದೇಹಗಳಿದ್ದವು. ಇಂಡಿಯಾ ಓಪನ್ ಸಮಯದಲ್ಲಿ ಸ್ವಚ್ಛತೆ, ನೈರ್ಮಲ್ಯ, ಪಕ್ಷಿ ಹಿಕ್ಕೆಗಳು ಮತ್ತು ಕೋತಿಗಳ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ದೆಹಲಿಯ ಗಾಳಿಯ ಗುಣಮಟ್ಟದ ಬಗ್ಗೆಯೂ ಕಳವಳಗಳಿದ್ದವು. ಆಗಸ್ಟ್ ವೇಳೆಗೆ ಎಲ್ಲವನ್ನೂ ಸರಿಪಡಿಸಲಾಗಿದೆ. ಸ್ಥಳವೇ ಹೊಸ ರೂಪ ಪಡೆದುಕೊಂಡಿದೆ.
ದೆಹಲಿಯ ಕೆಡಿ ಜಾಧವ್ ಒಳಾಂಗಣ ಹಾಲ್ನಲ್ಲಿ ಇಂಡಿಯಾ ಓಪನ್ ಮತ್ತು ಸಿರಿ ಪೋರ್ಟ್ನಲ್ಲಿ ಥಾಮಸ್ ಮತ್ತು ಉಬರ್ ಕಪ್ ಸೇರಿದಂತೆ ಪ್ರಮುಖ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಹಾಗಿದ್ದರೂ ಬೆಂಗಳೂರು ಅಥವಾ ಹೈದರಾಬಾದ್ ಸುರಕ್ಷಿತ ಆಯ್ಕೆಯಾಗಬಹುದು ಎಂದು ಭಾವಿಸುವವರೂ ಬ್ಯಾಡ್ಮಿಂಟನ್ ಆಡಳಿತದಲ್ಲಿದ್ದರು. ಮುಖ್ಯವಾಗಿ ಪ್ರೇಕ್ಷಕರು ಎಲ್ಲಾ ಕ್ರೀಡೆಗಳಿಗೂ ಆಗಮಿಸುವರೇ ಎನ್ನುವ ಪ್ರಶ್ನೆ ಇತ್ತು. ಆದರೆ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಆನ್ ಸೆ ಯಂಗ್ ಅಭಿಮಾನಿಗಳೂ ಇದ್ದರು. ಚೌ ಟಿಯೆನ್ ಚೆನ್ಗೂ ಅಭಿಮಾನಿಗಳಿದ್ದರು. ಕೆನಡಾ ಮತ್ತು ಫ್ರಾನ್ಸ್ನ ಯುವ ಆಟಗಾರರನ್ನೂ ನೋಡಲು ಜನರು ಆಗಮಿಸಿದ್ದರು. ಗಾಯತ್ರಿ ಮತ್ತು ಟ್ರೀಸಾ ಇಡೀ ಕ್ರೀಡಾಂಗಣಕ್ಕೆ ರಂಗು ಬಳಿಸಿದ್ದರು.
ಮಾಹಿತಿ ಕೃಪೆ: ಇಂಡಿಯಾ ಟುಡೆ