ನ್ಯೂ ತೈಪೆ ಸಿಟಿ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ | 200ಮೀ.ಓಟ: ಬೆಳ್ಳಿ ಗೆದ್ದ ಅನಿಮೇಶ್ ಕುಜೂರ್
Update: 2026-06-07 23:20 IST
Photo: Instagtam
ಹೊಸದಿಲ್ಲಿ, ಜೂ.7: ಭಾರತೀಯ ಓಟಗಾರ ಅನಿಮೇಶ್ ಕುಜೂರ್ 2026ರ ಆವೃತ್ತಿಯ ನ್ಯೂ ತೈಪೆ ಸಿಟಿ ಅತ್ಲೆಟಿಕ್ಸ್ ಚಾಂಪಿಯನ್ಶಿಪ್‌ನ ಎರಡನೇ ದಿನವಾದ ರವಿವಾರ ಪುರುಷರ 200 ಮೀ. ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಕುಜೂರ್ 20.47 ಸೆಕೆಂಡ್‌ನಲ್ಲಿ ಗುರಿ ತಲುಪಿ ಈ ವರ್ಷದ ಶ್ರೇಷ್ಠ ಪ್ರದರ್ಶನ ನೀಡಿದರು. ಮಾತ್ರವಲ್ಲ, 2026ರ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಅರ್ಹತಾ ಸಮಯವನ್ನು(20.61 ಸೆಕೆಂಡ್) ಮೀರಿ ನಿಂತರು.
ಥಾಯ್ಲೆಂಡ್‌ನ ಪುರಿಪೋಲ್ ಬೂನ್ಸನ್(20.03 ಸೆಕೆಂಡ್)ನಂತರ ಕುಜೂರ್ ಎರಡನೇ ಸ್ಥಾನ ಪಡೆದರು.
ಶನಿವಾರ ಲಾಂಗ್ಜಂಪ್ ತಾರೆ ಶೈಲಿ ಸಿಂಗ್ ಹಾಗೂ ಮಹಿಳೆಯರ 4-100 ಮೀ. ರಿಲೇ ತಂಡವು ಚಿನ್ನದ ಪದಕ ಜಯಿಸಿತು. 110 ಮೀ. ಹರ್ಡಲ್ಸ್ ವಿಭಾಗದಲ್ಲಿ ತೇಜಸ್ ಶಿರ್ಸೆ ಅವರು ಬೆಳ್ಳಿ ಪದಕ ಬಾಚಿಕೊಂಡರು.