×
Ad

ಲಾರ್ಡ್ಸ್ ಟೆಸ್ಟ್ | ಕಿವೀಸ್ ವಿರುದ್ಧ ಇಂಗ್ಲೆಂಡ್‌ಗೆ ಭರ್ಜರಿ ಜಯ

Update: 2026-06-07 23:48 IST

Photo : PTI

ಲಂಡನ್, ಜೂ.7: ಆತಿಥೇಯ ಇಂಗ್ಲೆಂಡ್ ತಂಡ ನಾಲ್ಕನೇ ದಿನವಾದ ರವಿವಾರ ಭೋಜನ ವಿರಾಮಕ್ಕೆ ಮೊದಲೇ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 115 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಆಸ್ಟ್ರೇಲಿಯ ನೆಲದಲ್ಲಿ ಆ್ಯಶಸ್ ಸರಣಿಯನ್ನು ಸೋತ ನಂತರ ಆಂಗ್ಲರ ಪಡೆ ಸಕಾರಾತ್ಮಕ ಆರಂಭ ಪಡೆದಿದೆ. ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗೆಲ್ಲಲು 254 ರನ್ ಗುರಿ ಪಡೆದಿದ್ದ ಕಿವೀಸ್ ಪಡೆ 5 ವಿಕೆಟ್‌ಗಳ ನಷ್ಟಕ್ಕೆ 55 ರನ್‌ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿತು. ಮೊದಲೆರಡು ಗಂಟೆಗಳ ಆಟದಲ್ಲಿ ತನ್ನ ಉಳಿದ ಐದು ವಿಕೆಟ್ಗಳನ್ನು ಕಳೆದುಕೊಂಡ ನ್ಯೂಝಿಲ್ಯಾಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 138 ರನ್‌ಗೆ ಸರ್ವಪತನ ಕಂಡಿತು.

‘ಕ್ರಿಕೆಟಿನ ತವರು’ ಖ್ಯಾತಿಯ, ಬೌಲರ್‌ಗಳ ಸ್ನೇಹಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ತಂಡದ ವೇಗಿ ಗಸ್ ಅಟ್ಕಿನ್ಸನ್ 30 ರನ್‌ಗೆ ಐದು ವಿಕೆಟ್ ಗೊಂಚಲು ಪಡೆದರು. 24 ಬ್ಯಾಟರ್‌ಗಳು ಬೌಲ್ಡ್ ಇಲ್ಲವೇ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಯಾವುದೇ ಸ್ಪಿನ್ನರ್‌ಗಳು ಬೌಲಿಂಗ್ ಮಾಡಿಲ್ಲ.

ನ್ಯೂಝಿಲ್ಯಾಂಡ್ ತಂಡದ ಪರ ಗ್ಲೆನ್ ಫಿಲಿಪ್ಸ್ (ಔಟಾಗದೆ 44 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು. ಪ್ರವಾಸಿಗರ ಪಾಲಿಗೆ ಇದು ಅತ್ಯಂತ ನಿರಾಶಾದಾಯಕ ಟೆಸ್ಟ್ ಪಂದ್ಯವಾಗಿದೆ.

ಆರಂಭಿಕ ಆಟಗಾರ ಎಮಿಲಿಯೊ ಗೇ ಹಾಗೂ ವೇಗದ ಬೌಲರ್ ಓಲಿ ರಾಬಿನ್ಸನ್ ಉತ್ತಮ ಪ್ರದರ್ಶನ ನೀಡಿದ್ದಾರೆ.

ಎರಡನೇ ಇನಿಂಗ್ಸ್ನಲ್ಲಿ ಎಮಿಲಿಯೊ 57 ರನ್ ಗಳಿಸಿದ್ದು, ಇದು ಉಭಯ ತಂಡಗಳಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. ರಾಬಿನ್ಸನ್ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್ಗಳನ್ನು(5-39, 2-38)ಪಡೆದರು.

ಸರಣಿಯ ಎರಡನೇ ಟೆಸ್ಟ್ ಪಂದ್ಯವು ದ ಓವಲ ಜೂನ್ 17ರಿಂದ ಆರಂಭವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News