×
Ad

FIFA World Cup : ಮೆಕ್ಸಿಕೊಗೆ ಆಗಮಿಸಿದ ಇರಾನ್ ಫುಟ್ಬಾಲ್ ತಂಡ

Update: 2026-06-07 23:00 IST

Photo Credit : instagram

ಹೊಸದಿಲ್ಲಿ, ಜೂ.7: ವಿಶ್ವದ ಅತಿದೊಡ್ಡ ಕ್ರೀಡಾಕೂಟದ ಆರಂಭಕ್ಕೆ ದಿನಗಣನೆ ಆರಂಭವಾಗಿರುವಾಗಲೇ ಅಮೆರಿಕದ ನೆಲದಲ್ಲಿ ತಾನಾಡಲಿರುವ ಮೂರು ವಿಶ್ವಕಪ್ ಪಂದ್ಯಗಳಿಗೆ ಮುಂಚಿತವಾಗಿ ಇರಾನ್‌ನ ರಾಷ್ಟ್ರೀಯ ಫುಟ್ಬಾಲ್ ತಂಡವು ರವಿವಾರ ಮುಂಜಾನೆ ಮೆಕ್ಸಿಕೊದ ಟಿಜುವಾನಾಗೆ ಆಗಮಿಸಿತು.

ಕಳೆದ ಮೂರು ವಾರಗಳಿಂದ ತರಬೇತಿ ಪಡೆದಿದ್ದ ತುರ್ಕಿಯಾದಿಂದ ರಾತ್ರಿ ಹೊರಟಿದ್ದ ಇರಾನ್ ತಂಡವು ಬೆಳಗ್ಗೆ 5 ಗಂಟೆಗೆ ಸ್ಯಾನ್ಡಿಯಾಗೊದ ಗಡಿಯಾಚೆಗಿನ ಮೆಕ್ಸಿಕನ್ ನಗರದಲ್ಲಿ ಬಂದಿಳಿಯಿತು.

ಅಮೆರಿಕಕ್ಕೆ ಪ್ರವೇಶಿಸಲು ವೀಸಾ ನೀಡುವ ಬಗ್ಗೆ ಅನಿಶ್ಚಿತತೆ ಉಂಟಾಗಿದ್ದ ಸಂದರ್ಭದಲ್ಲಿ ತಂಡದ ಬೇಸ್ ಕ್ಯಾಂಪನ್ನು ಅರಿರೆನಾದಿಂದ ಮೆಕ್ಸಿಕೊಗೆ ಸ್ಥಳಾಂತರಿಸಲು ಇರಾನ್ ಫೆಡರೇಶನ್ ಕೊನೆಯ ಕ್ಷಣದಲ್ಲಿ ಮಾತುಕತೆ ನಡೆಸಿತು.

ಅಮೆರಿಕ ದೇಶವು ಶುಕ್ರವಾರ ಇರಾನಿನ ಎಲ್ಲ ಆಟಗಾರರಿಗೆ ವೀಸಾಗಳನ್ನು ನೀಡಿತ್ತು. ಆದರೆ ಪ್ರಮುಖ ವ್ಯವಸ್ಥಾಪಕ ಹಾಗೂ ಆಡಳಿತಾತ್ಮಕ ಸದಸ್ಯರು ಸೇರಿ ಹಲವಾರು ಸಹಾಯಕ ಸಿಬ್ಬಂದಿಗೆ ವೀಸಾಗಳನ್ನು ನೀಡಲಾಗಿಲ್ಲ ಎಂದು ಇರಾನಿನ ಫುಟ್ಬಾಲ್ ಫೆಡರೇಶನ್ ತಿಳಿಸಿದೆ.

ಇರಾನ್ ತಂಡವು ತನ್ನ ಮೊದಲ ಎರಡು ಗ್ರೂಪ್ ‘ಐ’ ಪಂದ್ಯಗಳನ್ನು ಲಾಸ್ ಏಂಜಲೀಸ್‌ನಲ್ಲಿ ಜೂನ್ 15ರಂದು ನ್ಯೂಝಿಲ್ಯಾಂಡ್ ವಿರುದ್ಧ ಹಾಗೂ ಜೂನ್ 21ರಂದು ಬೆಲ್ಜಿಯಂ ವಿರುದ್ಧ ಆಡಲಿದೆ. ನಂತರ ಜೂನ್ 26ರಂದು ಸಿಯಾಟಲ್‌ನಲ್ಲಿ ಈಜಿಪ್ಟ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News