ನೀರಜ್ ಚೌಹಾಣ್‌ | Photo Credit : PTI 

ನಗೋಯ: ತಮ್ಮದೇ ದೇಶದ ಧೀರಜ್ ಬೊಮ್ಮದೇವರ ಅವರನ್ನು 6-4 ಅಂತರದಿಂದ ಮಣಿಸಿದ ಭಾರತೀಯ ಆರ್ಚರ್ ನೀರಜ್ ಚೌಹಾಣ್ ಏಶ್ಯನ್ ಗೇಮ್ಸ್‌ನಲ್ಲಿ ಪುರುಷರ ರಿಕರ್ವ್ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು.

ಶನಿವಾರ ಇಬ್ಬರು ಭಾರತೀಯರ ನಡುವೆ ನಡೆದಿದ್ದ ಸ್ಪರ್ಧೆಯಲ್ಲಿ ಚೌಹಾಣ್ ಅವರು ಧೀರಜ್ ವಿರುದ್ಧ ಮೇಲುಗೈ ಸಾಧಿಸಿದರು. ಉತ್ತಮ ಆರಂಭ ಪಡೆದಿದ್ದ ಚೌಹಾಣ್ ಮೊದಲ ಸೆಟ್ ಅನ್ನು 29-26 ಅಂತರದಿಂದ ಗೆದ್ದುಕೊಂಡರು.

ಧೀರಜ್ ಎರಡನೇ ಸೆಟ್‌ನಲ್ಲಿ ಪುಟಿದೆದ್ದಿದ್ದು, 28 ಅಂಕ ಗಳಿಸಿದರೆ, ಚೌಹಾಣ್ 27 ಅಂಕ ಕಲೆ ಹಾಕಿದರು. ಧೀರಜ್ ಎರಡನೇ ಸೆಟ್ಟನ್ನು 2-0 ಅಂತರದಿಂದ ಜಯಿಸಿ ಪಂದ್ಯವನ್ನು 2-2ರಿಂದ ಸಮಬಲಗೊಳಿಸಿದರು.

ಮೂರನೇ ಸೆಟ್‌ನಲ್ಲಿ ಚೌಹಾಣ್ ಅವರು 28 ಅಂಕ ಗಳಿಸಿದರೆ, ಧೀರಜ್‌29 ಅಂಕ ಗಳಿಸಿದರು. ಧೀರಜ್ ಸೆಟನ್ನು 2-0 ಅಂತರದಿಂದ ಜಯಿಸಿ 4-2ರಿಂದ ಮುನ್ನಡೆ ಪಡೆದರು.

ಚೌಹಾಣ್ ನಾಲ್ಕನೇ ಸೆಟ್‌ನಲ್ಲಿ ತಿರುಗೇಟು ನೀಡಿ 30 ಅಂಕ ಗಳಿಸಿದರು. ಧೀರಜ್ 28 ಅಂಕ ಕಲೆ ಹಾಕಿದರು. ಚೌಹಾಣ್ ಸೆಟ್ಟನ್ನು 2-0 ಅಂತರದಿಂದ ಜಯಿಸಿ ಪಂದ್ಯವನ್ನು 4-4ರಿಂದ ಸಮಬಲಗೊಳಿಸಿದರು.

ಐದನೇ ಹಾಗೂ ಕೊನೆಯ ಸೆಟ್ ಕಂಚಿನ ಪದಕವನ್ನು ನಿರ್ಣಯಿಸಿತು. ಚೌಹಾಣ್ 29 ಅಂಕ ಗಳಿಸಿದರೆ, ಧೀರಜ್ 28 ಅಂಕ ಗಳಿಸಿದರು. ಅಂತಿಮವಾಗಿ ಚೌಹಾಣ್ ಕೊನೆಯ ಸೆಟ್ಟನ್ನು 2-0 ಅಂತರದಿಂದ ವಶಪಡಿಸಿಕೊಂಡರು. ಪಂದ್ಯವನ್ನು 6-4 ಅಂತರದಿಂದ ಗೆದ್ದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor