ದೀಪಕ್ ಪುನಿಯಾ | Photo Credit : PTI 

ನಗೋಯ: ಏಶ್ಯನ್ ಗೇಮ್ಸ್‌ನಲ್ಲಿ ಶನಿವಾರ ನಡೆದ ಪುರುಷರ 97 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ದೀಪಕ್ ಪುನಿಯಾ ಕಂಚಿನ ಪದಕ ಜಯಿಸಿದರು.

ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಪುನಿಯಾ ಅವರು ಮಂಗೋಲಿಯದ ಗಂಖುಯಾಗ್ ಗನ್ಬಾಟರ್‌ರನ್ನು 2-1 ಅಂತರದಿಂದ ಮಣಿಸಿದರು.

ಮೊದಲ ಅವಧಿಯಲ್ಲಿ ಎರಡು ಅಂಕ ಗಳಿಸಿದ ಪುನಿಯಾ 2-0 ಮುನ್ನಡೆ ಪಡೆದರು. ಆದರೆ, ಪುನಿಯಾ ಅವರ ರಕ್ಷಣಾತ್ಮಕ ಆಟಕ್ಕೆ ತಕ್ಕ ಉತ್ತರ ನೀಡಿದ ಮಂಗೋಲಿಯದ ಕುಸ್ತಿಪಟು ತನ್ನ ಮುನ್ನಡೆಯನ್ನು ಉಳಿಸಿಕೊಂಡು ಗೆಲುವು ತನ್ನದಾಗಿಸಿಕೊಂಡರು.

ಪುನಿಯಾ ಏಶ್ಯನ್ ಗೇಮ್ಸ್‌ನಲ್ಲಿ ಎರಡನೇ ಪದಕ ಜಯಿಸಿದರು. 2022ರ ಹಾಂಗ್‌ಝೌ ಗೇಮ್ಸ್‌ನಲ್ಲಿ 86 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

ಪುನಿಯಾ ಅವರು ಏಶ್ಯನ್ ಗೇಮ್ಸ್‌ನಲ್ಲಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತಕ್ಕೆ ಮೂರನೇ ಪದಕ ಗೆದ್ದುಕೊಟ್ಟರು. ಸುಜೀತ್ 65ಕೆಜಿ ವಿಭಾಗದಲ್ಲಿ ಶುಕ್ರವಾರ ಚಿನ್ನದ ಪದಕ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor