Glasgow 2026 Commonwealth Games | ಲಾನ್ ಬೌಲ್ಸ್: ಭಾರತೀಯ ಮಹಿಳಾ ಜೋಡಿಗೆ ಮೊದಲ ಸೋಲು

Update: 2026-07-26 22:02 IST

Photo Credit : SAI Media/X

ಗ್ಲಾಸ್ಗೊ, ಜು. 26: ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ಜೋಡಿ ಲಾನ್ ಬೌಲ್ಸ್ ಸ್ಪರ್ಧೆಯ ‘ಬಿ’ ಗುಂಪಿನ ಪಂದ್ಯದಲ್ಲಿ ರವಿವಾರ ಭಾರತದ ರೂಪಾ ರಾಣಿ ತಿರ್ಕೆ ಮತ್ತು ಪಿಂಕಿ ಸಿಂಗ್ ಜೋಡಿಯನ್ನು ನಮೀಬಿಯಾದ ಅಮಂಡಾ ಸ್ಟೀನ್ಕ್ಯಾಂಪ್ ಮತ್ತು ಡಯಾನಾ ವಿಲ್ಜೊಯೆನ್ ಜೋಡಿ ಸೋಲಿಸಿತು.

ಇದು ಈ ಸ್ಪರ್ಧೆಯಲ್ಲಿ ಭಾರತಕ್ಕೆ ಎದುರಾದ ಮೊದಲ ಪರಾಭವವಾಗಿದೆ. ಭಾರತೀಯ ಜೋಡಿಯು ಐದು ಅಂಕಗಳ ಮುನ್ನಡೆಯನ್ನು ಕೈಚೆಲ್ಲಿ ಮೊದಲ ಸೆಟ್‌ನ್ನು ಸೋತಿತು. ಆದರೆ, ಎರಡನೇ ಸೆಟ್‌ನಲ್ಲಿ ತೀವ್ರ ಪ್ರತಿಹೋರಾಟ ನೀಡಿ ಆ ಸೆಟ್‌ನ್ನು ಗೆದ್ದಿತು. ಹಾಗಾಗಿ ಪಂದ್ಯವು ಟೈಬ್ರೇಕರ್‌ ಗೆ ಹೋಯಿತು.

ಆದರೆ, ನಿರ್ಣಾಯಕ ಸೆಟ್‌ ನಲ್ಲಿ ಭಾರತೀಯ ಜೋಡಿಯು 3-0 ಅಂತರದಿಂದ ಪರಾಭವಗೊಂಡಿತು.

ಆದರೂ, ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಟೈಬ್ರೇಕರ್‌ನಲ್ಲಿ ಸೋತಿದ್ದರಿಂದ ಭಾರತದ ನಾಕೌಟ್ ಅರ್ಹತೆಯ ಆಸೆ ಜೀವಂತವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಗುಂಪಿನ ಅಂತಿಮ ಪಂದ್ಯವು ಯಾವ ತಂಡ ಮುಂದಿನ ಹಂತಕ್ಕೇರಲಿದೆ ಎಂಬುದನ್ನು ನಿರ್ಧರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News