Commonwealth games 2026 | ಬಾಕ್ಸಿಂಗ್ ನಲ್ಲಿ ಸಚಿನ್ ಸಿವಚ್ ಪ್ರಿ ಕ್ವಾರ್ಟರ್‌ ಫೈನಲ್‌ ಗೆ

Update: 2026-07-25 23:27 IST

 ಸಚಿನ್ ಸಿವಚ್  | Photo Credit : PTI  

ಗ್ಲಾಸ್ಗೊ, ಜು. 25: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಪುರುಷರ ಬಾಕ್ಸಿಂಗ್ 60 ಕೆಜಿ ವಿಭಾಗದಲ್ಲಿ ಭಾರತದ ಸಚಿನ್ ಸಿವಚ್ ಅಂತಿಮ 16ರ ಸುತ್ತಿಗೆ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಆರಂಭಿಕ ಸುತ್ತಿನಲ್ಲಿ ಅವರು ಕೆನಡದ ಕಿಯೋಮ ಅಲ್-ಅಹ್ಮದೀಯನ್ನು ಸೋಲಿಸಿದರು.

ಮೂರು ಸುತ್ತುಗಳ ಜಿದ್ದಾಜಿದ್ದಿನ ಸೆಣಸಾಟದಲ್ಲಿ, 26 ವರ್ಷದ ಸಿವಚ್ 4–1 ಅಂಕಗಳಿಂದ ಗೆದ್ದಿದ್ದಾರೆ ಎಂಬುದಾಗಿ ಘೋಷಿಸಲಾಯಿತು.

ಸೋಮವಾರ ನಡೆಯುವ ಅಂತಿಮ 16ರ ಸುತ್ತಿನ ಪಂದ್ಯದಲ್ಲಿ ಭಿವಾನಿಯ ಬಾಕ್ಸರ್ ಇಂಗ್ಲೆಂಡ್‌ನ ವಿಲಿಯಮ್ ಹೆವಿಟ್‌ರನ್ನು ಎದುರಿಸಲಿದ್ದಾರೆ.

ಸಿವಚ್ ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದರು. ಅವರಿಗೆ ಐವರು ತೀರ್ಪುಗಾರರ ಪೈಕಿ ಮೂವರು ಹೆಚ್ಚು ಅಂಕ ನೀಡಿದರು. ಎರಡನೇ ಸುತ್ತಿನಲ್ಲಿ, ಎಲ್ಲಾ ತೀರ್ಪುಗಾರರು ಒಮ್ಮತದಿಂದ ಅವರಿಗೆ 10 ಅಂಕಗಳನ್ನು ನೀಡಿದರು.

ಮೂರನೇ ಸುತ್ತಿನಲ್ಲಿ ಅವರು ಸೋಲನುಭವಿಸಿದರೂ, ಗೆಲುವಿಗೆ ಬೇಕಾದಷ್ಟು ಮುನ್ನಡೆಯನ್ನು ಅವರು ಅದಾಗಲೇ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News