ಮ್ಯಾಡ್ರಿಡ್ ಓಪನ್ ನಿಂದ ಹಿಂದೆ ಸರಿದ ಜೊಕೊವಿಕ್

Update: 2024-04-22 16:24 GMT

ಜೊಕೊವಿಕ್ | PC : X

ಮ್ಯಾಡ್ರಿಡ್ (ಸ್ಪೇನ್): ಸೋಮವಾರ ಆರಂಭಗೊಂಡ ಮ್ಯಾಡ್ರಿಡ್ ಓಪನ್ ಟೆನಿಸ್ ಪಂದ್ಯಾವಳಿಯಿಂದ ವಿಶ್ವದ ನಂಬರ ವನ್ ಆಟಗಾರ ಸರ್ಬಿಯದ ನೊವಾಕ್ ಜೊಕೊವಿಕ್ ಹಿಂದೆ ಸರಿದಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಜೊಕೊವಿಕ್ ಹಾಲಿ ಋತುವಿನಲ್ಲಿ ಈವರೆಗೆ ಯಾವುದೇ ಪ್ರಶಸ್ತಿಯನ್ನು ಗೆದ್ದಿಲ್ಲ. ಅವರು ಈ ವರ್ಷ ಕೇವಲ ನಾಲ್ಕು ಪಂದ್ಯಾವಳಿಗಳಲ್ಲಿ ಆಡಿದ್ದಾರೆ.

ಜೊಕೊವಿಕ್ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಮ್ಯಾಡ್ರಿಡ್ ಓಪನ್ನಿಂದ ಹಿಂದೆ ಸರಿದಂತಾಗಿದೆ. ಸ್ಪೇನ್ ರಾಜಧಾನಿಯಲ್ಲಿ ನಡೆಯುವ ಎರಡು ವಾರಗಳ ಮಣ್ಣಿನ ಅಂಗಳದ ಪಂದ್ಯಾವಳಿಯಲ್ಲಿ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದಾರೆ.

ಈ ವರ್ಷ ಮಾಸ್ಟರ್ಸ್ 1000 ಪಂದ್ಯಾವಳಿಯೊಂದರಿಂದ ಜೊಕೊವಿಕ್ ಹಿಂದೆ ಸರಿಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮೊದಲು, ಅವರು ಮಾರ್ಚ್ನಲ್ಲಿ ಮಯಾಮಿ ಓಪನ್ನಿಂದ ಹಿಂದೆ ಸರಿದಿದ್ದರು.

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಇನ್ನೋರ್ವ ಹಿರಿಯ ಆಟಗಾರ ರಫೇಲ್ ನಡಾಲ್ ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಈ ಹಿಂದೆ ಬಾರ್ಸಿಲೋನ ಓಪನ್ನಲ್ಲಿ ಆಡಿದ್ದರು. ಆದರೆ ಎರಡನೇ ಸುತ್ತಿನಲ್ಲಿ ಪರಾಭವಗೊಂಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News