×
Ad

2024-25ರ ಸಾಲಿಗೆ ಏಕದಿನ ಜರ್ಸಿ ಅನಾವರಣಗೊಳಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡ

Update: 2024-05-16 21:50 IST

PC : ANI

ಲಂಡನ್ : 2024-25ರ ಋತುವಿಗಾಗಿ ತನ್ನ ನೂತನ ಏಕದಿನ ಜರ್ಸಿಯನ್ನು ಇಂಗ್ಲೆಂಡ್ ಕ್ರಿಕೆಟ್ ತಂಡವು ಗುರುವಾರ ಅನಾವರಣಗೊಳಿಸಿದೆ. ಪುರುಷ ಮತ್ತು ಮಹಿಳಾ ಎರಡೂ ತಂಡಗಳಿಗಾಗಿ ವಿನ್ಯಾಸಗೊಳಿಸಲಾಗಿರುವ ಜರ್ಸಿಗಳನ್ನು ಇಂಗ್ಲೆಂಡ್ ಕ್ರಿಕೆಟ್ ತನ್ನ ‘ಎಕ್ಸ್’ ಖಾತೆಯಲ್ಲಿ ಪ್ರದರ್ಶಿಸಿದೆ.

‘‘ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ಸಿದ್ಧರಾಗಿದ್ದೇವೆ. 24-25ರ ಸಾಲಿನ ನಮ್ಮ ನೂತನ ಜರ್ಸಿಗಳು ಬಂದಿವೆ. ಅವುಗಳು ಈಗ ಆನ್ಲೈನ್ನಲ್ಲಿ ಲಭ್ಯವಿವೆ’’ ಎಂದು ಇಂಗ್ಲೆಂಡ್ ಕ್ರಿಕೆಟ್ ತನ್ನ ಸಂದೇಶದಲ್ಲಿ ಹೇಳಿದೆ.

ಇಂಗ್ಲೆಂಡ್ ಮೇ 22ರಿಂದ ಪಾಕಿಸ್ತಾನದ ವಿರುದ್ಧ ನಾಲ್ಕು ಪಂದ್ಯಗಳ ಅಂತರ್ರಾಷ್ಟ್ರೀಯ ಟಿ20 ಸರಣಿಯನ್ನು ಆಡಲಿದೆ. ಇದು ಜೂನ್ ಒಂದರಂದು ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಭ್ಯಾಸ ಸರಣಿಯಾಗಿ ಕೆಲಸ ಮಾಡುತ್ತದೆ. ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ.

ಇನ್ನು ಇಂಗ್ಲೆಂಡ್ ತಂಡಕ್ಕೆ ಮಹತ್ವದ ಏಕದಿನ ಸವಾಲು ಎದುರಾಗುವುದು ಪಾಕಿಸ್ತಾನದಲ್ಲಿ ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ. ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಇಂಗ್ಲೆಂಡ್ ತಂಡಕ್ಕೆ ತನ್ನ ಗುಂಪಿನಲ್ಲಿ ಆಸ್ಟ್ರೇಲಿಯ, ನಮೀಬಿಯ, ಒಮಾನ್ ಮತ್ತು ಸ್ಕಾಟ್ಲ್ಯಾಂಡ್ ತಂಡಗಳಿಂದ ಸವಾಲು ಎದುರಾಗಲಿದೆ.

ಹಾಲಿ ಚಾಂಪಿಯನ್ ಇಂಗ್ಲೆಂಡ್ ಟಿ20 ವಿಶ್ವಕಪ್ನಲ್ಲಿ ಮೊದಲ ಪಂದ್ಯವನ್ನು ಸ್ಕಾಟ್ಲ್ಯಾಂಡ್ ವಿರುದ್ಧ ಜೂನ್ 4ರಂದು ಬಾರ್ಬಡೋಸ್ನಲ್ಲಿ ಆಡಲಿದೆ. ಬಳಿಕ ಜೂನ್ 8ರಂದು ಅದೇ ಮೈದಾನದಲ್ಲಿ ಆಸ್ಟ್ರೇಲಿಯವನ್ನು ಎದುರಿಸಲಿದೆ.

ಆಸ್ಟ್ರೇಲಿಯದಲ್ಲಿ ನಡೆದ 2022ರ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪ್ರಶಸ್ತಿ ಗೆದ್ದಿತ್ತು. ಅದು ಫೈನಲ್ನಲ್ಲಿ ಪಾಕಿಸ್ತಾನವನ್ನು ಐದು ವಿಕೆಟ್ಗಳಿಂದ ಸೋಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News