×
Ad

ಟಿಮ್ ಡೇವಿಡ್ ವಿರುದ್ಧ ಕುಸ್ತಿಯ ಕೌಶಲ್ಯ ಪರೀಕ್ಷಿಸಿದ ಇಶಾನ್ ಕಿಶನ್

Update: 2024-05-16 22:14 IST

ಟಿಮ್ ಡೇವಿಡ್ಇ , ಶಾನ್ ಕಿಶನ್ | PC: X 

ಹೊಸದಿಲ್ಲಿ: ಮುಂಬೈ ಇಂಡಿಯನ್ಸ್ ಪಾಳಯದಲ್ಲಿರುವ ಆಲ್ರೌಂಡರ್ ಟಿಮ್ ಡೇವಿಡ್ ವಿರುದ್ಧ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ತನ್ನ ಕುಸ್ತಿಯ ಕೌಶಲ್ಯಗಳನ್ನು ಪರೀಕ್ಷಿಸಿದರು.

ಸಿಂಗಾಪುರ ಸಂಜಾತ ಆಸ್ಟ್ರೇಲಿಯದ ಆಟಗಾರ ಡೇವಿಡ್ ಆರು ಅಡಿ ಐದು ಇಂಚು ಎತ್ತರವಿದ್ದರೆ, ಇಶಾನ್ ಕಿಶನ್ ಐದು ಅಡಿ ಆರು ಇಂಚು ಎತ್ತರ ಇದ್ದಾರೆ.

ಡೇವಿಡ್ ಹಾಗೂ ಇಶಾನ್ ಪರಸ್ಪರ ಕುಸ್ತಿ ಮಾಡುತ್ತಿರುವ ಗಮ್ಮತ್ತಿನ ವೀಡಿಯೊವನ್ನು ಮುಂಬೈ ಇಂಡಿಯನ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ತನ್ನ ಕಡಿಮೆ ಎತ್ತರದ ಲಾಭವನ್ನು ಪಡೆದುಕೊಂಡಿರುವ ಇಶಾನ್, ಡೇವಿಡ್ ಅವರ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಆಗ ಇಬ್ಬರು ಕ್ರಿಕೆಟಿಗರು ಕೆಳಗೆ ಬಿದ್ದಿದ್ದು, ಅಂತಿಮವಾಗಿ ಇಶಾನ್ ತಾನೇ ಗೆದ್ದೆ ಎಂದು ಕೈಎತ್ತಿ ನಗುತ್ತಿರುವುದು ಎಂದು ವಿಡಿಯೊದಲ್ಲಿ ಕಂಡುಬಂದಿದೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪ್ರಸಕ್ತ ಐಪಿಎಲ್ ಟಿ20 ಟೂರ್ನಮೆಂಟ್ನಿಂದ ನಿರ್ಗಮಿಸಲ್ಪಟ್ಟ ಮೊದಲ ತಂಡ ಎನಿಸಿಕೊಂಡಿದೆ. ಮುಂಬೈನಲ್ಲಿ ಶುಕ್ರವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News