FIFA World Cup 2026 | ಸೌದಿ ಅರೇಬಿಯದ ವಿರುದ್ಧ ಸ್ಪೇನ್ ಜಯಭೇರಿ
Update: 2026-06-21 23:47 IST
Photo : x@SEFutbol
ಅಟ್ಲಾಂಟಾ, ಜೂ.21: ಫಾರ್ವರ್ಡ್ ಆಟಗಾರ ಮೈಕಲ್ ಓಯರ್ಝಾಬಲ್ (21ನೇ, 24ನೇ ನಿಮಿಷ) ಅವರ ಅವಳಿ ಗೋಲುಗಳ ನೆರವಿನಿಂದ ಸ್ಪೇನ್ ತಂಡವು ಫಿಫಾ ವಿಶ್ವಕಪ್ ನ ‘ಎಚ್’ ಗುಂಪಿನ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡವನ್ನು 4-0 ಗೋಲುಗಳ ಅಂತರದಿಂದ ಮಣಿಸಿದೆ.
2010ರ ವಿಶ್ವಕಪ್ ವಿಜೇತ ಸ್ಪೇನ್ ತಂಡವು ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿತ್ತು.
ರವಿವಾರ ನಡೆದ ಪಂದ್ಯದಲ್ಲಿ ಹಿಂದಿನ ತಪ್ಪನ್ನು ತಿದ್ದಿಕೊಂಡ ಸ್ಪೇನ್ ತಂಡಕ್ಕೆ ಯುವ ಸ್ಟಾರ್ ಆಟಗಾರ ಲಾಮಿನ್ ಯಮಾಲ್ 10ನೇ ನಿಮಿಷದಲ್ಲಿ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. ಮೈಕಲ್ 21ನೇ ಹಾಗೂ 24ನೇ ನಿಮಿಷಗಳಲ್ಲಿ ಗೋಲು ಗಳಿಸಿ ಸ್ಪೇನ್‌ನ ಮುನ್ನಡೆಯನ್ನು ಹೆಚ್ಚಿಸಿದರು. 49ನೇ ನಿಮಿಷದಲ್ಲಿ ಸೌದಿ ತಂಡದ ಹಸನ್ ಸ್ವಯಂ ಗೋಲು ಗಳಿಸಿದ್ದರಿಂದ ಸ್ಪೇನ್ ತಂಡದ ಮುನ್ನಡೆ 4-0ಕ್ಕೆ ವಿಸ್ತರಿಸಿತು.