2ನೇ ಟೆಸ್ಟ್: ಎರಡು ದಶಕದ ನಂತರ 11 ವಿಕೆಟ್ ಪಡೆದ ಮೊದಲ ಬೌಲರ್ ಮ್ಯಾಟ್ ಹೆನ್ರಿ
Photo : x@BLACKCAPS
ದ ಓವಲ್, ಜೂ.21: ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರ ಮಹತ್ವದ ಪ್ರದರ್ಶನವು ನ್ಯೂಝಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸರಿಗಟ್ಟುವಲ್ಲಿ ನೆರವಾಗಿದ್ದಲ್ಲದೆ, ಕ್ರಿಕೆಟ್ ದಿಗ್ಗಜರ ಸಾಲಿಗೆ ಸೇರಿಸಿದೆ.
ಕಿವೀಸ್ ವೇಗಿ ಹೆನ್ರಿ 2005ರ ನಂತರ ದ ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 10ಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಆಗಿದ್ದಾರೆ. 21 ವರ್ಷಗಳ ಹಿಂದೆ ಆ್ಯಷಸ್ ಸರಣಿಯಲ್ಲಿ ಶೇನ್ ವಾರ್ನ್ ಈ ಸಾಧನೆ ಮಾಡಿದ್ದರು.
1994ರ ನಂತರ ದ ಓವಲ್ ಮೈದಾನದಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಆಗಿದ್ದಾರೆ. 1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಡೆವೊನ್ ಮಾಲ್ಕಮ್ ಸ್ಮರಣೀಯ ಪ್ರದರ್ಶನ ನೀಡಿದ್ದರು.
ಹೆನ್ರಿ ಅವರ ಜೀವನಶ್ರೇಷ್ಠ ಪ್ರದರ್ಶನದ ನೆರವಿನಿಂದ ನ್ಯೂಝಿಲೆಂಡ್ ತಂಡವು 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 253 ರನ್‌ಗಳಿಂದ ಮಣಿಸಿ ಸರಣಿ ಸಮಬಲಗೊಳಿಸಿದೆ.
ಗೆಲ್ಲಲು 463 ರನ್ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 209 ರನ್‌ಗೆ ಆಲೌಟ್ ಆಗಿದೆ. ಹೆನ್ರಿ ಪಂದ್ಯದಲ್ಲಿ ಒಟ್ಟು 11 ವಿಕೆಟ್‌ಗಳನ್ನು ಪಡೆದಿದ್ದಾರೆ.