×
Ad

ತ್ರಿಕೋನ ಏಕದಿನ ಸರಣಿ ಫೈನಲ್ | ಶ್ರೀಲಂಕಾ ‘ಎ’ ವಿರುದ್ಧ ಭಾರತ ‘ಎ’ ತಂಡಕ್ಕೆ 66 ರನ್ ಜಯ

Update: 2026-06-21 22:54 IST

Photo : x@BCCI

ಡಾಂಬುಲ್ಲಾ, ಜೂ.21: ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (94 ರನ್, 29 ಎಸೆತ), ನಾಯಕ ತಿಲಕ್ ವರ್ಮಾ (67 ರನ್, 90 ಎಸೆತ) ಅವರ ಅರ್ಧಶತಕದ ಆಟ ಹಾಗೂ ಯಶ್ ಠಾಕೂರ್ (3-45), ವಿಪ್ರಜ್ ನಿಗಮ್ (3-60) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡವು ಶ್ರೀಲಂಕಾ ‘ಎ’ ವಿರುದ್ಧದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯವನ್ನು 66 ರನ್‌ ಗಳ ಅಂತರದಿಂದ ಗೆದ್ದುಕೊಂಡಿತು.

ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ‘ಎ’ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 377 ರನ್ ಗಳಿಸಿತು.

ಗೆಲುವಿಗೆ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ‘ಎ’ ತಂಡವು ವನುಜ ಸಹಾನ್ (62 ರನ್, 69 ಎಸೆತ) ಹಾಗೂ ಸದೀರ ಸಮರವಿಕ್ರಮ (52 ರನ್, 44 ಎಸೆತ) ಅವರ ಅರ್ಧಶತಕದ ಹೋರಾಟದ ನಡುವೆಯೂ 47.1 ಓವರ್‌ಗಳಲ್ಲಿ 311 ರನ್‌ಗಳಿಗೆ ಆಲೌಟಾಯಿತು.

ಯಶ್ ಠಾಕೂರ್ ಹಾಗೂ ವಿಪ್ರಜ್ ನಿಗಮ್ ತಲಾ ಮೂರು ವಿಕೆಟ್ ಪಡೆದರೆ, ಅನುಕೂಲ್ ರಾಯ್ (2-42) ಎರಡು ವಿಕೆಟ್ ಕಬಳಿಸಿ ಲಂಕಾ ತಂಡವನ್ನು ನಿಯಂತ್ರಿಸಲು ನೆರವಾದರು.

ವೈಭವ್ ಸೂರ್ಯವಂಶಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News