×
Ad

FIFA World Cup | ದಕ್ಷಿಣ ಆಫ್ರಿಕ ಆಟಗಾರನಿಗೆ 3 ಪಂದ್ಯಗಳ ನಿಷೇಧ

Update: 2026-06-18 22:12 IST

Photo Credit : AP 

ಹೊಸದಿಲ್ಲಿ, ಜೂ. 18: ಕಳೆದ ಗುರುವಾರ ನಡೆದ ಫಿಫಾ ವಿಶ್ವಕಪ್ 2026ರ ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ ಆಟಗಾರ ರಾಬರ್ಟೊ ಅಲ್ವರಾಡೊ ಅವರ ಮುಖಕ್ಕೆ ಗುದ್ದಿದ್ದ ದಕ್ಷಿಣ ಆಫ್ರಿಕದ ಆಟಗಾರ ಟೆಂಬ ಝ್ವಾನೇ ಮೇಲಿನ ನಿಷೇಧವನ್ನು ಮೂರು ಪಂದ್ಯಗಳಿಗೆ ವಿಸ್ತರಿಸಲಾಗಿದೆ ಎಂದು ಫುಟ್ಬಾಲ್‌ನ ಜಾಗತಿಕ ಆಡಳಿತ ಮಂಡಳಿ ಫಿಫಾ ಬುಧವಾರ ಪ್ರಕಟಿಸಿದೆ.

ಈ ಘಟನೆಯ ಬಳಿಕ, ಅವರನ್ನು ತಕ್ಷಣ ಮೈದಾನದಿಂದ ಹೊರಗೆ ಕಳುಹಿಸಲಾಗಿತ್ತು.

ಮೆಕ್ಸಿಕೊದ ಅಝ್ಟೆಕ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯವನ್ನು ಮೆಕ್ಸಿಕೊ 2-0 ಗೋಲುಗಳ ಅಂತರದಿಂದ ಗೆದ್ದಿದೆ. ಆ ಪಂದ್ಯದಲ್ಲಿ, ಅಂತಿಮವಾಗಿ ದಕ್ಷಿಣ ಆಫ್ರಿಕ ತಂಡದಲ್ಲಿ ಒಂಭತ್ತು ಆಟಗಾರರು ಉಳಿದಿದ್ದರು. ಇನ್ನೋರ್ವ ಆಟಗಾರ ಸ್ಫೆಫೆಲೊ ಸಿಟೋಲೆಯನ್ನು ಅದಕ್ಕಿಂತ ಮೊದಲೇ ಹೊರಗೆ ಕಳುಹಿಸಲಾಗಿತ್ತು.

36 ವರ್ಷದ ಝ್ವಾನೇ 20 ನಿಮಿಷಗಳ ಮೊದಲು ಬದಲಿ ಆಟಗಾರನಾಗಿ ಬಂದಿದ್ದರು. ಮೆಕ್ಸಿಕೊ ಬಾಕ್ಸ್‌ನ ತುದಿಯಲ್ಲಿ ಅಲ್ವರಾಡೊರನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ಅವರ ಕೈ ಅಲ್ವರಾಡೊ ಅವರ ಮುಖಕ್ಕೆ ಬಡಿದಿತ್ತು.

ಆಗ ಅವರಿಗೆ ಬ್ರೆಝಿಲ್ ರೆಫರಿ ವಿಲ್ಟನ್ ಸಂಪಯೊ ಕೆಂಪು ಕಾರ್ಡ್ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News