Photo Credit : PTI 

ಹೊಸದಿಲ್ಲಿ: ಭಾರತ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯದ ಸ್ಥಳವನ್ನು ಹೊಸದಿಲ್ಲಿಯಿಂದ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗಿದೆ. ಈ ಎರಡು ತಂಡಗಳ ನಡುವಿನ ಪಂದ್ಯವು ಡಿ.13ರಂದು ನಿಗದಿಯಾಗಿತ್ತು.

ಸಂಭಾವ್ಯ ಹವಾಮಾನ ಅಡಚಣೆ ಹಾಗೂ ಕ್ರೀಡಾಂಗಣದ ಪ್ರಸ್ತಾವಿತ ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶನ್‌ನ(ಡಿಡಿಸಿಎ)ಕೋರಿಕೆಯ ಮೇರೆಗೆ ಪಂದ್ಯದ ಸ್ಥಳ ಬದಲಾವಣೆ ಮಾಡಲಾಗಿದೆ.

ಇದೀಗ ಮೊದಲ ಏಕದಿನ ಪಂದ್ಯವು ಡಿಸೆಂಬರ್ 13ರಂದು ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಕ್ರೀಡಾಂಗಣವು ಅಂತರ್‌ರಾಷ್ಟ್ರೀಯ ಪಂದ್ಯದ ಆಯೋಜನೆಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಡಿಡಿಸಿಎ ಮಾಹಿತಿ ನೀಡಿದೆ.

ಹೊಸದಿಲ್ಲಿಯು ಗುಜರಾತ್, ಸರ್ವಿಸಸ್ ಹಾಗೂ ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯಗಳು, ಕೆಲವು ಮಹಿಳೆಯರು ಹಾಗೂ ಜೂನಿಯರ್ ಸ್ಪರ್ಧಾವಳಿಗಳ ಆತಿಥ್ಯವಹಿಸಲು ಸಜ್ಜಾಗಿದೆ.

ಪಿಚ್‌ಗಳು ಹಾಗೂ ಹೊರಗಿನ ಮೈದಾನ(ಔಟ್‌ಫೀಲ್ಡ್)ಮರು ನಿರ್ಮಿಸುತ್ತಿರುವುದರಿಂದ ಕೋಟ್ಲಾ ಮೈದಾನವು ಆತಿಥೇಯ ತಂಡದ ದೇಶೀಯ ಪಂದ್ಯಗಳಿಗೆ ಲಭ್ಯವಿರುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor