×
Ad

ಐಪಿಎಲ್ ಫೈನಲ್ ಬಳಿಕ ಗುಜರಾತ್ ಟೈಟನ್ಸ್ ಆಟಗಾರರು ತೆರಳುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್; ತಪ್ಪಿದ ಅನಾಹುತ

ಸುಮಾರು ಒಂದು ಗಂಟೆ ರಸ್ತೆಯಲ್ಲಿ ಸಿಲುಕಿಕೊಂಡ ಆಟಗಾರರು

Update: 2026-06-01 12:06 IST

Photo source: X

ಅಹ್ಮದಾಬಾದ್: ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಎದುರು ಸೋತ ನಂತರ ಗುಜರಾತ್ ಟೈಟನ್ಸ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಹೋಟೆಲ್‌ಗೆ ವಾಪಾಸ್ಸಾಗುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಆಟಗಾರರು ಸುಮಾರು ಒಂದು ಗಂಟೆ ರಸ್ತೆಯಲ್ಲಿ ಸಿಲುಕಿಕೊಂಡರು ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ ಬಳಿಕ ಬಸ್ ಒಳಗೆ ಹೊಗೆ ತುಂಬಿಕೊಂಡು ಆಟಗಾರರ ಸುರಕ್ಷತೆ ಕುರಿತು ಆತಂಕ ಸೃಷ್ಟಿಯಾಗಿತ್ತು. ಬಳಿಕ ಎಲ್ಲಾ ಆಟಗಾರರನ್ನು ಬಸ್ ನಿಂದ ಸುರಕ್ಷಿತವಾಗಿ ಇಳಿಸಲಾಗಿದೆ. ಹೋಟೆಲ್‌ಗೆ ಕರೆದೊಯ್ಯಲು ಮತ್ತೊಂದು ಬಸ್ ವ್ಯವಸ್ಥೆ ಮಾಡುವ ಮೊದಲು ಅವರು ಕೆಲ ಕಾಲ ರಸ್ತೆಯಲ್ಲೇ ಕಾದು ನಿಂತಿದ್ದರು.

ರವಿವಾರ ನಡೆದ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಐದು ವಿಕೆಟ್‌ಗಳಿಂದ ಗುಜರಾತ್ ತಂಡ ಸೋಲನ್ನು ಕಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News