×
Ad

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಭಾರತದ ದಂತಕತೆ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ

Update: 2024-05-16 11:11 IST

 ಸುನೀಲ್ ಚೆಟ್ರಿ | PC : PTI

ಹೊಸದಿಲ್ಲಿ: ಜೂನ್ 6ರಂದು ಕುವೈತ್ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದ ನಂತರ ತಾನು ಅಂತಾರಾಷ್ಟ್ರೀಯ ಫುಟ್ ಬಾಲ್ ನಿಂದ ನಿವೃತ್ತನಾಗಲಿದ್ದೇನೆ ಎಂದು ಗುರುವಾರ ಭಾರತದ ಫುಟ್ ಬಾಲ್ ದಂತಕತೆ ಸುನೀಲ್ ಚೆಟ್ರಿ ಪ್ರಕಟಿಸಿದ್ದಾರೆ. ಭಾರತದ ರಾಷ್ಟ್ರೀಯ ತಂಡದ ನಾಯಕರಾದ ಸುನೀಲ್ ಚೆಟ್ರಿ ತಮ್ಮ ಈ ನಿರ್ಧಾರವನ್ನು ವಿಡಿಯೊವೊಂದನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರಕಟಿಸಿದ್ದಾರೆ. ಭಾರತದ ಪರ ಇದುವರೆಗೆ 145 ಪಂದ್ಯಗಳನ್ನಾಡಿರುವ ಸುನೀಲ್ ಚೆಟ್ರಿ, ತಮ್ಮ 20 ವರ್ಷಗಳ ವೃತ್ತಿ ಜೀವನದಲ್ಲಿ ಒಟ್ಟು 93 ಗೋಲುಗಳನ್ನು ಹೊಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News