ಆಸ್ಟ್ರೇಲಿಯದ ವಿರುದ್ಧ ಅಂಡರ್-18 ಸರಣಿಗೆ ತಂಡ ಪ್ರಕಟಿಸಿದ ಹಾಕಿ ಇಂಡಿಯಾ
Photo Credit : hockeyindia.org
ಹೊಸದಿಲ್ಲಿ, ಮೇ 7: ಆಸ್ಟ್ರೇಲಿಯ ತಂಡದ ವಿರುದ್ಧ ಭೋಪಾಲ್‌ನಲ್ಲಿ ನಡೆಯಲಿರುವ ಅಂಡರ್-18 ಸರಣಿಗೆ ಹಾಕಿ ಇಂಡಿಯಾವು ಗುರುವಾರ 24 ಸದಸ್ಯರ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಪ್ರಕಟಿಸಿದೆ.
ಸರಣಿಯು ಮೇ 15ರಿಂದ 20ರ ತನಕ ಭೋಪಾಲ್‌ನ ಉಧವ್ ದಾಸ್ ಮೆಹ್ತಾ ಸಾಯಿ ಸೆಂಟ್ರಲ್ ಸೆಂಟರ್‌ನಲ್ಲಿ ನಡೆಯಲಿದೆ.
ನಾಲ್ಕು ಪಂದ್ಯಗಳ ಸರಣಿಯು ಜಪಾನ್‌ನಲ್ಲಿ ಮೇ 29ರಿಂದ ಜೂನ್ 6ರ ತನಕ ನಡೆಯಲಿರುವ ಪುರುಷರ ಹಾಗೂ ಮಹಿಳೆಯರ ಅಂಡರ್-18 ಏಷ್ಯಾ ಕಪ್ ಕಾಕಮಿಗಹರಕ್ಕೆ ತಂಡದ ತಯಾರಿಯಾಗಿದೆ.
ರಾಷ್ಟ್ರೀಯ ಕೋಚಿಂಗ್ ಶಿಬಿರದಲ್ಲಿ ವಾರಗಳ ಕಾಲ ನಡೆದ ಪರಿಶೀಲನೆಯ ನಂತರ ಅಂತಿಮ ತಂಡಗಳನ್ನು ಆಯ್ಕೆ ಮಾಡಲಾಗಿದೆ.
ಫಾರ್ವರ್ಡ್ ಆಟಗಾರ ಕೇತನ್ ಕುಶ್ವಾವಾ ಭಾರತದ ಅಂಡರ್-18 ಪುರುಷರ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸ್ವೀಟಿ ಕುಜೂರ್ ಮಹಿಳೆಯರ ಹಾಕಿ ತಂಡವನ್ನು ನಾಯಕಿಯಾಗಿ ಮುನ್ನಡೆಸಲಿದ್ದಾರೆ.
ಪುರುಷರ ಸಬ್-ಜೂನಿಯರ್ ತಂಡಕ್ಕೆ ಭಾರತದ ಮಾಜಿ ನಾಯಕ ಸರ್ದಾರ್ ಸಿಂಗ್ ಹಾಗೂ ರಜನೀಶ್ ಮಿಶ್ರಾ ತರಬೇತಿ ನೀಡಲಿದ್ದಾರೆ.
ಭಾರತದ ಅಂಡರ್-18 ಪುರುಷರ ತಂಡ:
ಗೋಲ್‌ಕೀಪರ್‌ಗಳು: ಸಾವನ್ ಕುಮಾರ್, ಆಯುಷ್ ರಜಕ್, ವಿಶಾಲ್ ಬಾಡಾ.
ಡಿಫೆಂಡರ್‌ಗಳು: ಅನ್ಶ್ ಬಹುಟ್ರಾ, ಆಶೀಶ್ ತನಿ ಪುರ್ತಿ, ಅರ್ಮಾನ್ ಸೊರೆಂಗ್, ದೀಪಪ್ರಕಾಶ್ ಟೊಪ್ಪೊ, ಕರಣ್ ಗೌತಮ್, ಕರಣ್ ಧನುಕ್.
ಮಿಡ್‌ಫೀಲ್ಡರ್‌ಗಳು: ಪ್ರೇಮಚಂದ್ ಸೊಯ್, ರಾಹುಲ್ ಯಾದವ್, ವರಿಂದರ್ ಸಿಂಗ್, ರೋಮಿತ್ ಪಾಲ್, ಅರ್ಜನ್‌ದೀಪ್ ಸಿಂಗ್, ಗುರ್‌ಸಿಮ್ರನ್‌ಪ್ರೀತ್ ಸಿಂಗ್, ಅರ್ಷದೀಪ್ ಸಿಂಗ್, ಅವಿ ಮಾನಿಕ್‌ಪುರಿ.
ಫಾರ್ವರ್ಡ್‌ಗಳು: ಆಕಾಶ್ ದೀಪ್, ಕೇತನ್ ಕುಶ್ವಾವಾ (ನಾಯಕ), ಶಾರುಕ್ ಅಲಿ, ಗಾಝಿ ಖಾನ್, ಪ್ರಹ್ಲಾದ್ ರಾಜ್‌ಭರ್, ಸಿದ್ದಾರ್ಥ್ ಬೆನ್, ಜಯ್ಸನ್ ಕಾಂಡುಲ್ನಾ.