ಟ್ರ್ಯಾಕ್ ಸೈಕ್ಲಿಂಗ್ ರೇಸ್ : ಮೊದಲ ಸುತ್ತಿನಲ್ಲಿ ಸೋತ ದಿನೇಶ್, ಹರ್ಷವೀರ್

Update: 2026-08-03 00:36 IST

ಗ್ಲಾಸ್ಗೊ: ಪುರುಷರ 40 ಕಿ.ಮೀ.ಪಾಯಿಂಟ್ಸ್ ರೇಸ್ನಲ್ಲಿ ಫೈನಲ್ಗೆ ತಲುಪುವಲ್ಲಿ ವಿಫಲವಾದ ಭಾರತದ ಅತ್ಲೀಟ್ಗಳು ಕಾಮನ್ವೆಲ್ತ್ ಗೇಮ್ಸ್ ನ ಟ್ರ್ಯಾಕ್ ಸೈಕಲ್ ಸ್ಪರ್ಧೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರು.

ಕ್ರೀಡಾಕೂಟದ ಕೊನೆಯ ದಿನವಾದ ರವಿವಾರ ಹರ್ಷವೀರ್ ಸಿಂಗ್ ಸೆಖೋನ್ ಹಾಗೂ ದಿನೇಶ್ ಕುಮಾರ್ ಮೊದಲ ಸುತ್ತಿನಲ್ಲಿ ಸೋತು ನಿರ್ಗಮಿಸಿದರು.

ಹೀಟ್-1ರಲ್ಲಿ -40 ಡಿಎನ್ಎಫ್ ದಾಖಲಿಸಿದ ಹರ್ಷವೀರ್ ಫೈನಲ್ ಸ್ಪರ್ಧೆಯಿಂದ ಹೊರಗುಳಿದರು.

ಹೀಟ್-2ರಲ್ಲಿ ಸ್ಪರ್ಧಿಸಿದ ದಿನೇಶ್ ಆರಂಭಿಕ ಹಂತದಲ್ಲಿ ಸ್ವಲ್ಪ ಪ್ರತಿರೋಧ ಒಡ್ಡಿದರು. ಆದರೆ ಸ್ಪ್ರಿಂಟ್ ಲ್ಯಾಪ್ಸ್ನಲ್ಲಿ ನಿರ್ಣಾಯಕ ಅಂಕ ಗಳಿಸುವಲ್ಲಿ ವಿಫಲರಾದರು. ಮೊದಲ 10 ಲ್ಯಾಪ್ಗಳ ನಂತರ ದಿನೇಶ್ ಐದನೇ ಸ್ಥಾನ ಪಡೆದರು.

ಭಾರತೀಯರು ಕೊನೆಯ ಎರಡು ಸ್ಪ್ರಿಂಟ್ ಲ್ಯಾಪ್ಗಳಲ್ಲಿ 4 ಅಂಕ ಗಳಿಸಿ ಮೂರನೇ ಸ್ಥಾನ ಪಡೆದರು. ಆದರೆ ಅಂತಿಮವಾಗಿ 11ನೇ ಸ್ಥಾನ ಪಡೆದು ಫೈನಲ್ನಿಂದ ವಂಚಿತರಾದರು.

ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ 1,000 ಮೀ. ಟೈಮ್ ಟ್ರಯಲ್ ಫೈನಲ್ನಲ್ಲಿ ಭಾಗವಹಿಸಿದ ಭಾರತದ ರೊನಾಲ್ಡೊ ಸಿಂಗ್ 1:04.191 ಅವಧಿಯಲ್ಲಿ ಗುರಿ ತಲುಪಿ 20ನೇ ಸ್ಥಾನ ಪಡೆದರು. ಉಳಿದ ರೈಡರ್ಗಳು ತಮ್ಮ ಓಟವನ್ನು ಪೂರ್ಣಗೊಳಿಸಿದ ನಂತರ ಮಣಿಪುರದ ಸೈಕಲಿಸ್ಟ್ ಸಿಂಗ್ ಅವರ ಅಂತಿಮ ರ್ಯಾಂಕಿಂಗ್ ಕುಸಿತಗೊಂಡಿತು. ಈ ಮೂಲಕ ಗೇಮ್ಸ್ನ ಕೊನೆಯ ದಿನ ಭಾರತದ ಟ್ರ್ಯಾಕ್ ಸೈಕ್ಲಿಂಗ್ ಅಭಿಯಾನ ಅಂತ್ಯಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News