Photo Credit : ANI 

ಹೊಸದಿಲ್ಲಿ: ಮುಂಬರುವ ಆಸ್ಟ್ರೇಲಿಯ ವಿರುದ್ಧ ಹಲವು ಮಾದರಿಯ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಅಂಡರ್-19 ತಂಡಕ್ಕೆ ವಯಸ್ಸಿನ ವಂಚನೆಯ ಆರೋಪಿ ರೋಹಿತ್ ಯಾದವ್ ಬದಲಿಗೆ ಸೌರಾಷ್ಟ್ರದ ಕ್ರಿಕೆಟಿಗ ಆರ್ಯನ್ ಸಾವ್ಸಾನಿ ಹಾಗೂ ಹರ್ಯಾಣದ ತನ್ಮಯ್ ಬಲೋಡಾರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ.

‘‘ಭಾರತದ ಅಂಡರ್-19 ಏಕದಿನ ತಂಡಕ್ಕೆ ರೋಹಿತ್ ಯಾದವ್ ಬದಲಿಗೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಆರ್ಯನ್ ಸಾವ್ಸಾನಿ ಅವರನ್ನು ಜೂನಿಯರ್ ಆಯ್ಕೆ ಸಮಿತಿಯು ನೇಮಿಸಿದೆ. ಟೆಸ್ಟ್ ತಂಡಕ್ಕೆ ಹರ್ಯಾಣ ಕ್ರಿಕೆಟ್ ಸಂಸ್ಥೆಯ ತನ್ಮಯ್ ಬಲೋಡಾರನ್ನು ನೇಮಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ ತಂಡವು ರಾಜ್‌ಕೋಟ್ ಹಾಗೂ ಅಹ್ಮದಾಬಾದ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಮೂರು ಏಕದಿನ ಹಾಗೂ ಎರಡು ಯೂತ್ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಎಲ್ಲ ಮೂರು ಯೂತ್ ಏಕದಿನ ಪಂದ್ಯಗಳು ಹಾಗೂ ಮೊದಲ ಯೂತ್ ಟೆಸ್ಟ್ ಪಂದ್ಯವು ರಾಜ್‌ಕೋಟ್‌ನಲ್ಲಿ ಆಡಲಾಗುತ್ತದೆ. ಕೊನೆಯ ಟೆಸ್ಟ್ ಪಂದ್ಯವನ್ನು ಅಹ್ಮದಾಬಾದ್‌ನಲ್ಲಿ ಆಡಲಾಗುತ್ತದೆ.

ಜೂನಿಯರ್ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಂಗಾಳದ ಕ್ರಿಕೆಟಿಗ ರೋಹಿತ್ ಭಾರತದ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಶ್ರೀಲಂಕಾಕ್ಕೆ ಪ್ರಯಾಣಿಸಿದ್ದ ಭಾರತ ತಂಡದ ಭಾಗವಾಗಿದ್ದ ರೋಹಿತ್ ಲಂಕಾದ ಅಂಡರ್-19 ತಂಡದ ವಿರುದ್ದ ಯೂತ್ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದಿದ್ದರು. ಆನಂತರ ಆಸ್ಟ್ರೇಲಿಯ ವಿರುದ್ಧ ಸರಣಿಗೆ ಆಯ್ಕೆಯಾಗಿದ್ದರು.

ಆದರೆ, ರೋಹಿತ್ ಕಳೆದ ಕೆಲವು ವರ್ಷಗಳಿಂದ ತನ್ನ ಹುಟ್ಟಿದ ದಿನಾಂಕವನ್ನು ಪದೇ ಪದೇ ಬದಲಿಸಿರುವುದು ಪತ್ತೆಯಾಗಿತ್ತು. ಬಿಸಿಸಿಐ ತಕ್ಷಣವೇ ಜಾರಿಗೆ ಬರುವಂತೆ ರೋಹಿತ್‌ಗೆ ಎರಡು ವರ್ಷಗಳ ಕಾಲ ನಿಷೇಧ ಹೇರಲು ನಿರ್ಧರಿಸಿದೆ. ವಯಸ್ಸಿನ ಪರಿಶೀಲನೆಯ ಸಂದರ್ಭದಲ್ಲಿ ರೋಹಿತ್ ಅವರ ಆಧಾರ್ ಕಾರ್ಡ್ ದಾಖಲೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿತ್ತು.

ಏಕದಿನ ಪಂದ್ಯಗಳಿಗೆ ಭಾರತದ ಅಂಡರ್-19 ತಂಡ: ಲಕ್ಷ್ಯ ರಾಯ್‌ಚಂದಾನಿ(ನಾಯಕ), ಯಶವರ್ಧನ್ ಚೌಹಾಣ್(ಉಪ ನಾಯಕ), ರಜತ್ ಬಘೇಲ್(ವಿಕೆಟ್‌ಕೀಪರ್), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಕುಶಾಗ್ರ ಓಜಾ, ಅರ್ಜುನ್ ರಾಜ್‌ಪುತ್, ಮನಾಲ್ ಚೌಹಾಣ್, ಅನ್ವಯ್ ದ್ರಾವಿಡ್(ವಿಕೆಟ್‌ಕೀಪರ್), ವಿ.ಯಶ್ವೀರ್,ಶವಿನ್ ವಿನೋದ್, ಮೋಹಿತ್ ಉಲ್ವಾ, ಚಿಗುರುಪಟಿ ವೆಂಕಟ, ಕಾವ್ಯ ಪಟೇಲ್, ಆರ್ಯನ್ ಸಾವ್ಸಾನಿ.

ಯೂತ್ ಟೆಸ್ಟ್‌ಗೆ ಭಾರತದ ಅಂಡರ್-19 ತಂಡ: ಯಶವರ್ಧನ್ ಚೌಹಾಣ್(ನಾಯಕ), ಲಕ್ಷ್ಯ ರಾಯ್‌ಚಂದಾನಿ(ಉಪ ನಾಯಕ), ಸಾಗರ್ ವಿರ್ಕ್, ಕುಶಾಗ್ರ ಓಜಾ, ಮನಾಲ್ ಚೌಹಾಣ್, ಕುಶ್ ಪಟೇಲ್, ಮಾನವ್ ಕೃಷ್ಣ(ವಿಕೆಟ್‌ಕೀಪರ್), ಅಭಿಪ್ರಾಯ್ ಬಿಸ್ವಾಸ್(ವಿಕೆಟ್‌ಕೀಪರ್), ಇಶಾನ್ ಓಂ, ಆಯನ್ ಅಕ್ರಂ, ಪ್ರನವ್ ರಾಘವೇಂದ್ರ, ಪ್ರಿಯಾಂಶು ಸಿಂಗ್, ಮೋಹಿತ್, ಆರ್ಯನ್ ಯಾದವ್, ತನ್ಮಯ್ ಬಲೊಡಾ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor