ಶ್ರೀಮುರಳಿ | Photo Credit : Roaring Star Sri Murali \ facebook 

ಬೆಂಗಳೂರು: ಕರ್ನಾಟಕ ರಾಜ್ಯ ಪಿಕಲ್‌ ಬಾಲ್ ಸಂಸ್ಥೆ (KSPA) ಹಾಗೂ ಎಂಟ್ರೋಪಿ ಸ್ಪೋರ್ಟ್ಸ್ ಅಂಡ್ ಈವೆಂಟ್ಸ್ ಸಹಯೋಗದಲ್ಲಿ ರಾಜ್ಯದ ಚೊಚ್ಚಲ ಅಧಿಕೃತ ಪಿಕಲ್‌ ಬಾಲ್ ಲೀಗ್ ‘ಕರ್ನಾಟಕ ಪಿಕಲ್‌ ಬಾಲ್ ಪ್ರೀಮಿಯರ್ ಲೀಗ್’ (KPPL) ಆವೃತ್ತಿ-1ರ ತಂಡಗಳ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ನಡೆಯಿತು.

ಈ ಕೂಟಕ್ಕೆ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರನ್ನು ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಲಾಗಿದ್ದು, ಲೀಗ್ ನ ಮೊದಲ ಆವೃತ್ತಿಯು ಅಕ್ಟೋಬರ್ 9ರಿಂದ 11ರವರೆಗೆ ನಡೆಯಲಿದೆ.

►ಲೀಗ್ ನಲ್ಲಿ ಸೆಣಸಲಿರುವ 7 ತಂಡಗಳು:

• ಬೆಂಗಳೂರು ಸ್ಮ್ಯಾಷರ್ಸ್

• ಕೂರ್ಗ್ ಒರಿಜಿನಲ್ಸ್

• ಮಂಗಳೂರು ರೋರರ್ಸ್

• ಮೈಸೂರು ರಾಯಲ್ಸ್

• ಶಿವಮೊಗ್ಗ ಮಾಸ್ಟರ್ ಬ್ಲಿಸ್

• ತುಮಕೂರು ಟೈಟಾನ್ಸ್

• ಬಳ್ಳಾರಿ ಬ್ಲಾಸ್ಟರ್ಸ್

ರಾಜ್ಯದಲ್ಲಿ ಪಿಕಲ್‌ ಬಾಲ್ ಕ್ರೀಡೆಯನ್ನು ತಳಮಟ್ಟದಿಂದ ಬೆಳೆಸಲು ಮತ್ತು ಕ್ರೀಡಾಪಟುಗಳಿಗೆ ವೃತ್ತಿಪರ ವೇದಿಕೆ ಕಲ್ಪಿಸಲು ಈ ಲೀಗ್ ನೆರವಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಿಕಲ್‌ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎ.ಜಿ. ಶಿವಶಂಕರ್, ಉಪಾಧ್ಯಕ್ಷ ಕೆ.ವಿ. ಶ್ರೀನಿವಾಸಮೂರ್ತಿ, ಅನಿಲ್ ಶಾ, ಆಶಿಶ್ ಸ್ವರ್ಣಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor