ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ ಐತಿಹಾಸಿಕ ಗೆಲುವು; ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಇನ್ನಿಂಗ್ಸ್ ಜಯ
Update: 2026-06-08 15:33 IST
Photo credit: X/BCCI
ಮುಲ್ಲನ್‌ಪುರ: ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 300 ರನ್‌ಗಳಿಂದ ಮಣಿಸಿ, ತನ್ನ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಇನ್ನಿಂಗ್ಸ್ ಗೆಲುವಿನ ದಾಖಲೆ ಬರೆದಿದೆ.
ಸೋಮವಾರ ಮಧ್ಯಾಹ್ನ ಮೂರು ದಿನಗಳ ಒಳಗೆ ಪಂದ್ಯವನ್ನು ಮುಗಿಸಿದ ಭಾರತ, ಅಫ್ಘಾನಿಸ್ತಾನ ವಿರುದ್ಧ ಏಕಪಕ್ಷೀಯ ಪ್ರಾಬಲ್ಯ ಮೆರೆಯಿತು. ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಈ ಗೆಲುವು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತಿದೊಡ್ಡ ಗೆಲುವಾಗಿದೆ.
ಈ ಮೂಲಕ ಭಾರತವು 2018ರಲ್ಲಿ ರಾಜ್‌ಕೋಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಾಖಲಿಸಿದ್ದ ಇನ್ನಿಂಗ್ಸ್ ಮತ್ತು 272 ರನ್‌ಗಳ ಗೆಲುವಿನ ದಾಖಲೆಯನ್ನು ಹಿಂದಿಕ್ಕಿದೆ.