IPL 2026 | ಪ್ಲೇಆಫ್‍ಗೆ ಅಧಿಕೃತ ಪ್ರವೇಶ ಪಡೆದ RCB; ಎಂಟು ಪಂದ್ಯ ಬಾಕಿ-ಯಾವ ತಂಡಕ್ಕೆ ಚಾನ್ಸ್?
Photo: x.com/airnewsalerts
ಹೊಸದಿಲ್ಲಿ: ಇಂಡಿಯನ್ ಪ್ರಿಮಿಯರ್ ಲೀಗ್ (IPL) ಪ್ರಸಕ್ತ ಸೀಸನ್ ಲೀಗ್ ಹಂತದಲ್ಲಿ ಇನ್ನು ಕೇವಲ ಎಂಟು ಪಂದ್ಯಗಳು ಬಾಕಿ ಇದ್ದು, ಕೇವಲ RCB ಮಾತ್ರ ಅಧಿಕೃತವಾಗಿ ಪ್ಲೇಆಫ್ ಹಂತಕ್ಕೆ ಮುನ್ನಡೆದಿದೆ. ಎಲ್‍ಎಸ್‍ಜಿ ಹಾಗೂ MI ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿವೆ. ಮುಂದಿನ ಪಂದ್ಯದಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿದಲ್ಲಿ ಮಾತ್ರ SRH ಹೊರಬೀಳುವ ಸಾಧ್ಯತೆ ಇದೆ.
ಸಮಾನ ಅಂಕಗಳನ್ನು ಗಳಿಸಿದರೂ ಗುಜರಾತ್ ಗೆ ಹೋಲಿಸಿದರೆ CSK ಹಾಗೂ ರಾಜಸ್ತಾನ್ ರಾಯಲ್ಸ್ ತಂಡಕ್ಕೆ ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶ ಸೀಮಿತ. ವಾರಾಂತ್ಯದಲ್ಲಿ ಜಯ ಗಳಿಸುವ ಮೂಲಕ ಕೆಕೆಆರ್ ಹಾಗೂ ಡೆಲ್ಲಿ ತಮ್ಮ ಪ್ಲೇಆಫ್ ಕನಸನ್ನು ಜೀವಂತ ಉಳಿಸಿಕೊಂಡಿದ್ದರೂ, ಈ ತಂಡಗಳ ಮುಂದಿನ ಹಾದಿ ಅತ್ಯಂತ ಕಠಿಣವಾಗಿದೆ.
ಉಳಿದ ಏಳು ತಂಡಗಳ ಪೈಕಿ ಮೂರು ಸ್ಥಾನ ಪಡೆಯುವ ತಂಡಗಳನ್ನು ಈಗಲೇ ನಿರ್ಧರಿಸುವುದು ಕಷ್ಟ.
ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿರುವ RCB ಈಗಾಗಲೇ ಅರ್ಹತೆ ಪಡೆದಿದೆ. ಗುಜರಾತ್ ಕೂಡಾ ಬಹುತೇಕ ಅರ್ಹತೆ ಪಡೆದಿದ್ದರೂ, ಹೊರಬೀಳುವ ಕ್ಷೀಣ ಸಾಧ್ಯತೆಯೂ ಇದೆ. SRH, CSK ಮತ್ತು RR ತಲಾ 16 ಅಂಕಗಳನ್ನು ಪಡೆದಲ್ಲಿ ಎರಡನೇ ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಹೋರಾಟ ಏರ್ಪಡುತ್ತದೆ. ಇಂಥ ಸನ್ನಿವೇಶದಲ್ಲೂ ಇತರ ಮೂರು ತಂಡಗಳಿಗಿಂತ ಗುಜರಾತ್ ರನ್‍ರೇಟ್ ಅಧಿಕ ಇದೆ.
ಅಂತಿಮ ನಾಲ್ಕರಲ್ಲಿ ಸ್ಥಾನ ಪಡೆಯುವ SRH ಸಂಭವನೀಯತೆ ಶೇಕಡ 87.8ರಷ್ಟಿಷ್ಟರೆ, ಅಗ್ರ 2ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಶೇಕಡ 50ರಷ್ಟಿದೆ. ಸಿಎಸ್‍ಕೆಗೆ ಈ ಅವಕಾಶಗಳು ಕ್ರಮವಾಗಿ ಶೇಕಡ 44.9 ಹಾಗೂ ಶೇಕಡ 25. ರವಿವಾರದ ಸೋಲಿನ ಬಳಿಕ RR ಅವಕಾಶ ಶೇಕಡ 44.5ರಷ್ಟಿದ್ದು, ಅಂತಿಮ ಎರಡರಲ್ಲಿ ಸ್ಥಾನ ಗಳಿಸುವ ಸಾಧ್ಯತೆ ಶೇಕಡ 9.4ರಷ್ಟು ಮಾತ್ರ ಇದೆ. ಅಂತೆಯೇ ಪಂಜಾಬ್ ಅವಕಾಶ ಶೇಕಡ 35.2ಕ್ಕೆ ಕುಸಿದಿದೆ.