×
Ad

ಸೂಪರ್ ಚೆಸ್ ಕ್ಲಾಸಿಕ್: ಪ್ರಜ್ಞಾನಂದ, ಕೀಮರ್ ನಡುವಿನ ಪಂದ್ಯ ಡ್ರಾ

Update: 2026-05-17 23:35 IST

ಪ್ರಜ್ಞಾನಂದ | Photo Credit : PTI

ಬುಖಾರೆಸ್ಟ್ (ರೊಮೇನಿಯ), ಮೇ 17: ಗ್ರ್ಯಾಂಡ್ ಚೆಸ್ ಟೂರ್ನ ಭಾಗವಾಗಿರುವ ಸೂಪರ್ ಚೆಸ್ ಕ್ಲಾಸಿಕ್ ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಡ್ರಾ ಸಾಧಿಸಿ ಜಂಟಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ.

ಕಳೆದ ಸುತ್ತಿನಲ್ಲಿ ಉಝ್ಬೆಕಿಸ್ತಾನ್‌ನ ಜಾವೊಖಿರ್ ಸಿಂದರೊವ್ ವಿರುದ್ಧ ಜಯ ಗಳಿಸಿದ್ದ ಪ್ರಜ್ಞಾನಂದ, ಈಗ ಒಟ್ಟು 3 ಅಂಕಗಳ ಪೈಕಿ 2 ಅಂಕಗಳನ್ನು ಗಳಿಸಿದ್ದಾರೆ. ಸದ್ಯ ಅವರು ಫ್ರಾನ್ಸ್‌ನ ಮ್ಯಾಕ್ಸಿಮ್ ವಾಚಿಯರ್-ಲಾಗ್ರೇವ್, ನೆದರ್ಲ್ಯಾಂಡ್ಸ್‌ನ ಜೋರ್ಡನ್ ವ್ಯಾನ್ ಫಾರೀಸ್ಟ್ ಮತ್ತು ಅನೀಶ್ ಗಿರಿ ಹಾಗೂ ಜರ್ಮನಿಯ ಕೀಮರ್ ಅವರೊಂದಿಗೆ ಅಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ.

ಪಂದ್ಯಾವಳಿಯಲ್ಲಿರುವ ಒಟ್ಟು 10 ಆಟಗಾರರಲ್ಲಿ ಅರ್ಧದಷ್ಟು ಮಂದಿ ಅಗ್ರಸ್ಥಾನದಲ್ಲಿದ್ದಾರೆ. ಅಮೆರಿಕದ ಫ್ಯಾಬಿಯಾನೊ ಕರುವಾನಾ ಮತ್ತು ವೆಸ್ಲಿ ಸೋ ತಮ್ಮ ಎಲ್ಲಾ ಪಂದ್ಯಗಳನ್ನು ಡ್ರಾ ಮಾಡಿಕೊಂಡು ತಲಾ 1.5 ಅಂಕಗಳನ್ನು ಗಳಿಸಿದ್ದಾರೆ. ಇರಾನ್‌ನಿಂದ ಫ್ರಾನ್ಸ್‌ಗೆ ವಲಸೆ ಹೋಗಿರುವ ಅಲಿರೆಜಾ ಫಿರೋಝ ಮತ್ತು ಸ್ಥಳೀಯ ತಾರೆ ಡೀಕ್ ಬೊಗ್ಡಾನ್-ಡ್ಯಾನಿಯಲ್ ಇಬ್ಬರೂ ತಲಾ ಅರ್ಧ ಅಂಕ ಹೊಂದಿದ್ದಾರೆ.

ಪ್ರಜ್ಞಾನಂದ ಮತ್ತು ಕೀಮರ್ ನಡುವಿನ ಪಂದ್ಯವು 64 ನಡೆಗಳಲ್ಲಿ ಡ್ರಾದಲ್ಲಿ ಕೊನೆಗೊಂಡಿತು.

ಇನ್ನೊಂದು ಪಂದ್ಯದಲ್ಲಿ, ಅನೀಶ್ ಗಿರಿ, ಫಿರೋಝ ವಿರುದ್ಧ ಜಯ ದಾಖಲಿಸಿದರು. ಇದು ಪಂದ್ಯಾವಳಿಯಲ್ಲಿ ಅವರ ಮೊದಲ ಜಯವಾಗಿದೆ.

ಮತ್ತೊಂದು ಪಂದ್ಯದಲ್ಲಿ, ವ್ಯಾನ್ ಫಾರೀಸ್ಟ್, ಡೀಕ್ ವಿರುದ್ಧ ಗೆಲುವು ಸಾಧಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News