ಜಪಾನ್ ಓಪನ್: ಸಿನಿಯಾಕೋವಾ ಚಾಂಪಿಯನ್
ಕಟೆರಿನಾ ಸಿನಿಯಾಕೋವಾ | Photo Credit : X
ಟೋಕಿಯೊ: ಅಮೆರಿಕದ ಆಶ್ಲಿನ್ ಕ್ರೂಗರ್‌ರನ್ನು ಮಣಿಸಿದ ಝೆಕಿಯಾ ಆಟಗಾರ್ತಿ ಕಟೆರಿನಾ ಸಿನಿಯಾಕೋವಾ ಜಪಾನ್ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಸಿನಿಯಾಕೋವಾ ಅವರು ಕ್ರೂಗರ್‌ರನ್ನು 6-1, 6-0 ನೇರ ಸೆಟ್‌ಗಳಿಂದ ಮಣಿಸಿದರು. ಮೂಲಕ ಜಪಾನ್ ಓಪನ್‌ನಲ್ಲಿ ಮೂರು ವರ್ಷಗಳ ನಂತರ ಮೊದಲ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದರು.
ಸಿನಿಯಾಕೋವಾ 22ರ ವಯಸ್ಸಿನ ಅಮೆರಿಕದ ಆಟಗಾರ್ತಿಯ ಸರ್ವ್ ಅನ್ನು ಕೇವಲ 64 ನಿಮಿಷಗಳಲ್ಲಿ ಆರು ಬಾರಿ ತುಂಡರಿಸಿದರು. ಈ ಮೂಲಕ ತನ್ನ ವೃತ್ತಿಜೀವನದ ಆರನೇ ಪ್ರಶಸ್ತಿಯನ್ನು ಜಯಿಸಿದರು. 2023ರಲ್ಲಿ ಚೀನಾದಲ್ಲಿ ಜಿಯಾಂಗ್‌ಕ್ಸಿ ಓಪನ್ ಗೆದ್ದ ನಂತರ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡರು.