ಎಲೆನಾ ರಿಬಾಕಿನಾ | Photo Credit : AP

ನಿಂಗ್ಡೋ: ನಿಂಗ್ಡೋ ಓಪನ್ ಫೈನಲ್‌ನಲ್ಲಿ ಕೆನಡಾದ ಶ್ರೇಯಾಂಕರಹಿತ ಲೇಲಾಹ್ ಫೆರ್ನಾಂಡಿಸ್‌ರನ್ನು 6-2, 6-2 ನೇರ ಸೆಟ್‌ಗಳ ಅಂತರದಿಂದ ಮಣಿಸಿರುವ ಎಲೆನಾ ರಿಬಾಕಿನಾ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡರು.

ಮುಂದಿನ ತಿಂಗಳು ನಡೆಯಲಿರುವ ಡಬ್ಲ್ಯುಟಿಎ ಫೈನಲ್ಸ್‌ಗಿಂತ ಮೊದಲು ವಿಶ್ವದ ನಂ.1 ಆಟಗಾರ್ತಿಯಾಗಿ ಮೊದಲ ಬಾರಿ ಪ್ರಶಸ್ತಿ ಗೆದ್ದರು.

ಈ ಗೆಲುವಿನ ಮೂಲಕ ಕಝಕ್ ಆಟಗಾರ್ತಿ ವರ್ಷಾಂತ್ಯದಲ್ಲಿ ನಂ.1 ರ್ಯಾಂಕ್ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ರಿಬಾಕಿನಾ ಡಬ್ಲ್ಯುಟಿಎ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ತಲುಪಿದ್ದಾರೆ.

ರವಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ 27ರ ವಯಸ್ಸಿನ ರಿಬಾಕಿನಾ ಕೇವಲ 38 ನಿಮಿಷಗಳಲ್ಲಿ ಮೊದಲ ಸೆಟ್ಟನ್ನು ಗೆದ್ದುಕೊಂಡರು. 30ನೇ ರ್ಯಾಂಕಿನ ಫೆರ್ನಾಂಡಿಸ್ ಎರಡನೇ ಸೆಟ್ಟನ್ನು ಉತ್ತಮವಾಗಿ ಆರಂಭಿಸಿದರು. ಆದರೆ ರಿಬಾಕಿನಾ ಒತ್ತಡವನ್ನು ಮೆಟ್ಟಿ ನಿಂತು ಮುನ್ನಡೆ ಪಡೆದರು. ಮೂರು ಬಾರಿಯ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಎರಡನೇ ಸೆಟ್ಟನ್ನು 6-2 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.

ಬೀಜಿಂಗ್ ಹಾಗೂ ವುಹಾನ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ರಿಬಾಕಿನಾಗೆ ಈ ಗೆಲುವು ಹೊಸ ಹುಮ್ಮಸ್ಸು ತಂದಿದೆ. ಈ ವಾರ ಟೋಕಿಯೊದಲ್ಲಿ ಪಾನ್ ಪೆಸಿಫಿಕ್ ಓಪನ್‌ನಲ್ಲಿ ಆಡಲಿರುವ ರಿಬಾಕಿನಾ, ನವೆಂಬರ್ 8ರಂದು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor