ವಿರಾಟ್ ಕೊಹ್ಲಿ ದಾಖಲೆ ಮುರಿದ ಜೋ ರೂಟ್

Update: 2026-07-17 20:22 IST

 ಜೋ ರೂಟ್ , ವಿರಾಟ್ ಕೊಹ್ಲಿ | Photo Credit : PTI 

ಕಾರ್ಡಿಫ್, ಜು.17: ರನ್ ಚೇಸ್ ವೇಳೆ ಮತ್ತೊಂದು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್ ಔಟಾಗದೆ 99 ರನ್ ಗಳಿಸಿ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಭಾರತ ತಂಡದ ವಿರುದ್ದ ನಾಲ್ಕು ವಿಕೆಟ್‌ಗಳ ಗೆಲುವು ತಂದುಕೊಟ್ಟರು. ಈ ವೇಳೆ ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದರು.

ಬೆನ್ ಡಕೆಟ್(0) ಔಟಾದ ನಂತರ ಜಸ್‌ಪ್ರಿತ್ ಬುಮ್ರಾ ಹಾಗೂ ಪ್ರಸಿದ್ಧ ಕೃಷ್ಣ ಅವರ ಆರಂಭಿಕ ಒತ್ತಡವನ್ನು ಮೆಟ್ಟಿ ನಿಂತ ರೂಟ್, 234 ರನ್ ಚೇಸ್ ವೇಳೆ ಸಂಪೂರ್ಣ ಹಿಡಿತ ಸಾಧಿಸಿದರು. 133 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಔಟಾಗದೆ 99 ರನ್ ಗಳಿಸಿ ಒಂದು ರನ್‌ನಿಂದ ಶತಕ ವಂಚಿತರಾದರು.

ಏಕದಿನ ಕ್ರಿಕೆಟ್‌ನಲ್ಲಿ ಯಶಸ್ವಿ ರನ್ ಚೇಸ್(ಕನಿಷ್ಠ 2000 ರನ್)ವೇಳೆ ಗರಿಷ್ಠ ಬ್ಯಾಟಿಂಗ್ ಸರಾಸರಿಯ ಪಟ್ಟಿಯಲ್ಲಿ ರೂಟ್ ಅವರು ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News