×
Ad

FIFA 2026 | ಮೆಸ್ಸಿಯೊಂದಿಗೆ ಈಜಿಪ್ಟ್ ಮುಖ್ಯ ಕೋಚ್ ವಾಗ್ವಾದ; ವಿಡಿಯೊ ವೈರಲ್

Update: 2026-07-08 13:20 IST

Screengrab: X/@ianmiles

ಅಟ್ಲಾಂಟಾ: ಇಲ್ಲಿನ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದ ಅರ್ಜೆಂಟೀನಾ ಮತ್ತು ಈಜಿಪ್ಟ್ ತಂಡಗಳ ನಡುವಿನ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ತಿರುವಿಗೆ ಸಾಕ್ಷಿಯಾಯಿತು. ಪಂದ್ಯದ ಮುಕ್ತಾಯದ ಹಂತದವರೆಗೂ 0-2 ಹಿನ್ನಡೆಯಲ್ಲಿದ್ದ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ, ಬಳಿಕ 3-2 ಅಂತರದ ರೋಚಕ ಗೆಲುವು ಸಾಧಿಸಿ, ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿತು.

ಪಂದ್ಯದ ಉತ್ತರಾರ್ಧ ಪ್ರಗತಿಯಲ್ಲಿದ್ದಾಗ, ಅರ್ಜೆಂಟೀನಾ ನಾಯಕ ಲಿಯೊನೆಲ್ ಮೆಸ್ಸಿಯೊಂದಿಗೆ ಟಚ್ ಲೈನ್ ಬಳಿ ಈಜಿಪ್ಟ್ ತಂಡದ ಮುಖ್ಯ ಕೋಚ್ ಹೊಸಮ್ ಹಸನ್ ಮಾತಿನ ಚಕಮಕಿಗೆ ಇಳಿದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಾಗ, ಪಂದ್ಯದ ರೆಫ್ರಿ ಈಜಿಪ್ಟ್ ತರಬೇತಿ ಸಿಬ್ಬಂದಿಗಳಿಗೆ ರೆಡ್ ಕಾರ್ಡ್ ತೋರಿಸಿದರು. ವಾಗ್ವಾದದ ವೇಳೆ ಈಜಿಪ್ಟ್ ಫುಟ್ ಬಾಲ್ ಆಡಳಿತ ಮಂಡಳಿಯ ಅಧಿಕೃತ ಲಾಂಛನವಾದ ಎಕ್ಸ್ ಮಾದರಿಯಲ್ಲಿ ಇರಿಸಲಾದ ಶಸ್ತ್ರಾಸ್ತ್ರಗಳ ಸನ್ನೆಯನ್ನು ಹೊಸಮ್ ಹಸನ್ ಅವರು ಲಿಯೋನೆಲ್ ಮೆಸ್ಸಿಯತ್ತ ತೋರಿಸಿದ್ದು ಮತ್ತಷ್ಟು ಪ್ರಕ್ಷುಬ್ಧತೆಯನ್ನು ಸೃಷ್ಟಿಸಿತು. ಈ ನಡವಳಿಕೆ ಫಿಫಾದ ಜನಾಂಗೀಯ ನಿಂದನೆ ವಿರೋಧಿ ಶಿಷ್ಟಾಚಾರದ ಕುರಿತು ಮತ್ತೊಂದು ಸುತ್ತಿಗೆ ಚರ್ಚೆಗೆ ಕಾರಣವಾಯಿತು.

ಟಚ್ ಲೈನ್ ಬಳಿ ಈಜಿಪ್ಟ್ ಮುಖ್ಯ ತರಬೇತುದಾರ ಹೊಸಮ್ ಹಸನ್ ಅವರು ಅರ್ಜೆಂಟೀನಾ ತಂಡದ ನಾಯಕ ಮೆಸ್ಸಿಯೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಾಗ್ವಾದಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ, ವಾಗ್ವಾದದ ವೇಳೆ ಅವರು ಎಕ್ಸ್ ಮಾದರಿಯ ಸಂಕೇತ ತೋರಿಸಿದ್ದು, ವಿವಾದಕ್ಕೆ ಗುರಿಯಾಗಿದೆ.

ಹೊಸಮ್ ಹಸನ್ ಮತ್ತು ಲಿಯೋನೆಲ್ ಮೆಸ್ಸಿಯೊಂದಿಗೆ ನಡೆದ ಮಾತಿನ ವಾಗ್ವಾದದ ಆಡಿಯೊ ಇದುವರೆಗೆ ಬಿಡುಗಡೆಯಾಗಿಲ್ಲ. ಫಿಫಾ ಅಥವಾ ಈಜಿಪ್ಟ್ ಫುಟ್ ಬಾಲ್ ಅಸೋಸಿಯೇಷನ್ ಕೂಡಾ ಈ ಮಾತಿನ ವಾಗ್ವಾದಕ್ಕೆ ಕಾರಣವೇನು ಎಂದು ಸ್ಪಷ್ಟಪಡಿಸಿಲ್ಲ. ಹೊಸಮ್ ಹಸನ್ ತೋರಿಸಿದ ಸಂಕೇತ ಮೆಸ್ಸಿ, ಅರ್ಜೆಂಟೀನಾ ತಂಡ, ಪಂದ್ಯದ ಅಧಿಕಾರಿಗಳು ಅಥವಾ ತಾಂತ್ರಿಕ ಪ್ರದೇಶದತ್ತ ನಡೆಯುತ್ತಿದ್ದ ಘಟನೆಯನ್ನು ಗುರಿಯಾಗಿಸಿಕೊಂಡಿತ್ತೇ ಎಂಬುದೂ ಈವರೆಗೆ ಸ್ಪಷ್ಟಗೊಂಡಿಲ್ಲ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News