ಪವರ್ ಪ್ಲೇನಲ್ಲಿ ಗರಿಷ್ಠ ವಿಕೆಟ್: ಇತಿಹಾಸ ನಿರ್ಮಿಸಿದ ಅರ್ಷದೀಪ್ ಸಿಂಗ್
ಅರ್ಷದೀಪ್ ಸಿಂಗ್ | Photo Credit : PTI
ಹ್ಯಾಮಿಲ್ಟನ್, ನ.1: ಭಾರತ ತಂಡದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಟಿ-20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದರು. ಪೂರ್ಣ ಸದಸ್ಯ ರಾಷ್ಟ್ರಗಳು ಒಳಗೊಂಡಿರುವ ಪುರುಷರ ಟಿ-20 ಪಂದ್ಯಗಳಲ್ಲಿ ಮೊದಲ ಆರು ಓವರ್ ಗಳಲ್ಲಿ ಗರಿಷ್ಠ ವಿಕೆಟ್ ಗಳನ್ನು ಉರುಳಿಸಿ ಹೊಸ ಮೈಲಿಗಲ್ಲು ತಲುಪಿದ್ದಾರೆ.
ನ್ಯೂಝಿಲ್ಯಾಂಡ್ ತಂಡದ ವಿರುದ್ಧ ರವಿವಾರ ನಡೆದ ಐದನೇ ಹಾಗೂ ಕೊನೆಯ ಟಿ-20 ಪಂದ್ಯದ ವೇಳೆ ಅರ್ಷದೀಪ್ ಈ ಸಾಧನೆ ಮಾಡಿದರು. ಎಡಗೈ ವೇಗಿ ಅರ್ಷದೀಪ್ ಇನಿಂಗ್ಸ್ನ ಎರಡನೇ ಓವರ್ನಲ್ಲಿ ಕಿವೀಸ್ನ ಆರಂಭಿಕ ಬ್ಯಾಟರ್ ಫಿನ್ ಅಲೆನ್ ಅವರ ವಿಕೆಟ್ ಪಡೆದರು. ಇದರೊಂದಿಗೆ ಟಿ-20 ಕ್ರಿಕೆಟ್ ನ ಪವರ್ ಪ್ಲೇ ವೇಳೆ ತಮ್ಮ 65ನೇ ವಿಕೆಟ್ ಅನ್ನು ತಮ್ಮದಾಗಿಸಿಕೊಂಡರು.
ಮೊದಲ ಆರು ಓವರ್ ಗಳಲ್ಲಿ ಒಟ್ಟು 65 ವಿಕೆಟ್ ಗಳನ್ನು ಪಡೆದಿರುವ ನ್ಯೂಝಿಲ್ಯಾಂಡ್ ವೇಗಿ ಸೌಥಿ ಅವರ ದಾಖಲೆಯನ್ನು ಅರ್ಷದೀಪ್ ಸರಿಗಟ್ಟಿದರು. ಅರ್ಷದೀಪ್ ಕೇವಲ 99 ಇನಿಂಗ್ಸ್ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದರೆ, ಸೌಥಿ 119 ಇನಿಂಗ್ಸ್ಗಳಲ್ಲಿ 65 ವಿಕೆಟ್ ಗಳನ್ನು ಪಡೆದಿದ್ದರು.
ಟಿ-20 ಕ್ರಿಕೆಟ್ ನ ಮೊದಲ 6 ಓವರ್ ಗಳಲ್ಲಿ ಗರಿಷ್ಠ ವಿಕೆಟ್ ಪಡೆದವರು
• 65 – ಅರ್ಷದೀಪ್ ಸಿಂಗ್ (99 ಇನಿಂಗ್ಸ್)
• 65 – ಟಿಮ್ ಸೌಥಿ (119 ಇನಿಂಗ್ಸ್)
• 62 – ಬ್ಲೆಸ್ಸಿಂಗ್ ಮುಝರ್ಬನಿ (95 ಇನಿಂಗ್ಸ್)
• 62 – ರಿಚರ್ಡ್ ಗರಾವ (96 ಇನಿಂಗ್ಸ್)
• 60 – ಶಾಹೀನ್ ಅಫ್ರಿದಿ (99 ಇನಿಂಗ್ಸ್)