ತ್ರಿಕೋನ ಸರಣಿ: ಫೈನಲ್ ನಲ್ಲಿ ಸೋತ ಶ್ರೀಲಂಕಾ; ಪಾಕಿಸ್ತಾನಕ್ಕೆ ಜಯ
Photo Credit : PTI
ಲಾಹೋರ್, ಅ.31: ಆರಂಭಿಕ ಬ್ಯಾಟರ್ ಫಖರ್ ಝಮಾನ್ ಶತಕ (127 ರನ್, 99 ಎಸೆತ), ಸಾದ್ ಬೇಗ್ (74 ರನ್, 75 ಎಸೆತ) ಹಾಗೂ ಅರಾಫತ್ ಮಿನ್ಹಾಸ್ (61 ರನ್, 31 ಎಸೆತ) ಅವರ ಅರ್ಧಶತಕಗಳ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ಏಕದಿನ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮೂರು ವಿಕೆಟ್ ಗಳಿಂದ ಮಣಿಸಿ ಪ್ರಶಸ್ತಿ ಜಯಿಸಿದೆ.
ಶನಿವಾರ ನಡೆದ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಕಮಿಂದು ಮೆಂಡಿಸ್ ಶತಕ (131 ರನ್, 128 ಎಸೆತ) ಹಾಗೂ ಪವನ್ ರತ್ನನಾಯಕೆ ಅವರ ಅರ್ಧಶತಕದ (77 ರನ್, 65 ಎಸೆತ) ಕೊಡುಗೆಯ ನೆರವಿನಿಂದ ಶ್ರೀಲಂಕಾ ತಂಡವು 8 ವಿಕೆಟ್ ಗಳ ನಷ್ಟಕ್ಕೆ 325 ರನ್ ಗಳಿಸಿತು.
ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 48.3 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 331 ರನ್ ಗಳಿಸಿತು.