×
Ad

ರೋಹಿತ್ ಶರ್ಮಾ ಸಂಪೂರ್ಣವಾಗಿ ಫಿಟ್ ಇದ್ದಾರೆ: ಮಹೇಲ ಜಯವರ್ಧನೆ

Update: 2026-05-23 21:50 IST

ರೋಹಿತ್ ಶರ್ಮಾ | Photo Credit : PTI  

ಮುಂಬೈ, ಮೇ 23: ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ತನ್ನ ಬ್ಯಾಟಿಂಗ್‌ಗಿಂತಲೂ ಹೆಚ್ಚಾಗಿ ಫಿಟ್ನೆಸ್ ಬಗ್ಗೆಯೇ ಹೆಚ್ಚು ಸುದ್ದಿಯಾಗಿದ್ದಾರೆ.

ಮಂಡಿರಜ್ಜು ಗಾಯದಿಂದಾಗಿ 39ರ ವಯಸ್ಸಿನ ರೋಹಿತ್ ಈ ವರ್ಷದ ಐಪಿಎಲ್‌ನಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, 40.42ರ ಸರಾಸರಿಯಲ್ಲಿ, 160.70ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 283 ರನ್ ಗಳಿಸಿದ್ದಾರೆ.

ಗಾಯದ ಕಾರಣದಿಂದ ಭಾರತದ ಮಾಜಿ ನಾಯಕ ಕೆಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಮುಂಬೈ ತಂಡಕ್ಕೆ ವಾಪಸಾದ ನಂತರ ಕೇವಲ ಇಂಪ್ಯಾಕ್ಟ್ ಆಟಗಾರನಾಗಿದ್ದರು.

ರೋಹಿತ್ ಅವರ ಫಿಟ್ನೆಸ್ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿರುವ ಹೊರತಾಗಿಯೂ ಜೂನ್‌ನಲ್ಲಿ ಅಫ್ಘಾನಿಸ್ತಾನ ತಂಡ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ. ರೋಹಿತ್ ಲಭ್ಯತೆಯು ಫಿಟ್ನೆಸ್ ಸ್ಥಿತಿಯನ್ನು ಅವಲಂಬಿಸಿದೆ ಎಂದು ತಿಳಿಸಲಾಗಿದೆ.

ಮುಂಬೈ ಇಂಡಿಯನ್ಸ್ ತಂಡವು ರವಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ಈ ವರ್ಷದ ಐಪಿಎಲ್‌ನಲ್ಲಿ ಕೊನೆಯ ಪಂದ್ಯವನ್ನಾಡುವ ಮುನ್ನಾದಿನ ಮುಖ್ಯ ಕೋಚ್ ಮಹೇಲ ಜಯವರ್ಧನೆ ಅವರು ರೋಹಿತ್ 100 ಶೇ.ಫಿಟ್ ಇದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News