Photo Credit: ndtv

ಸಿಲ್ಹಟ್: ಆತಿಥೇಯ ಬಾಂಗ್ಲಾದೇಶ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಮಂದ ಬೆಳಕಿನಿಂದಾಗಿ ನೀರಸ ಡ್ರಾನಲ್ಲಿ ಕೊನೆಗೊಂಡಿದೆ. ಈ ಫಲಿತಾಂಶದ ನಂತರ ವಿಂಡೀಸ್ ತಂಡವು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ.

ಐದನೇ ಹಾಗೂ ಕೊನೆಯ ದಿನವಾದ ಸೋಮವಾರ ವೆಸ್ಟ್‌ಇಂಡೀಸ್ ತಂಡವು 3 ವಿಕೆಟ್ ನಷ್ಟಕ್ಕೆ 345 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. ಶತಕವೀರ ಕಾವೆಮ್ ಹಾಜ್ ನಿನ್ನೆಯ ಮೊತ್ತಕ್ಕೆ ಕೇವಲ ಎರಡು ರನ್ ಸೇರಿಸಿ ಔಟಾದರು. ಆಮಿರ್ ಜಾಂಗೂ ಔಟಾಗದೆ 39 ರನ್ ಗಳಿಸಿದರು.

ನಿನ್ನೆಯ ಸ್ಕೋರ್‌ಗೆ 53 ರನ್ ಸೇರಿಸಿದ ನಂತರ ವಿಂಡೀಸ್ 6 ವಿಕೆಟ್‌ಗಳ ನಷ್ಟಕ್ಕೆ 398 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಬಾಂಗ್ಲಾದೇಶದ ಗೆಲುವಿಗೆ 369 ರನ್ ಗುರಿ ನೀಡಿತು.

ಬಾಂಗ್ಲಾದೇಶ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿದ್ದಾಗ ಪಂದ್ಯಕ್ಕೆ ಮಂದ ಬೆಳಕು ಅಡ್ಡಿಯಾಯಿತು. ಉಭಯ ತಂಡಗಳ ನಾಯಕರು ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ನಿರ್ಧರಿಸಿದರು.

ಬಾಂಗ್ಲಾದೇಶದ ಪರ ತೌಹೀದ್(82 ರನ್, 140 ಎಸೆತ, 8 ಬೌಂಡರಿ)ಸರ್ವಾಧಿಕ ಸ್ಕೋರ್ ಗಳಿಸಿದರು. ಮುಶ್ಫಿಕುರ‌್ರಹೀಂ(49 ರನ್, 123 ಎಸೆತ)ಹಾಗೂ ತಂಝೀದ್ ಹಸನ್(21 ರನ್)ಎರಡಂಕೆಯ ಸ್ಕೋರ್ ಗಳಿಸಿದರು.

ವಿಂಡೀಸ್ ಪರ ಜೊಮೆಲ್ ವಾರಿಕನ್(3-44)ಯಶಸ್ವಿ ಪ್ರದರ್ಶನ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ(242 ರನ್)ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 82 ರನ್ ಗಳಿಸಿದ ತೌಹೀದ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯುದ್ದಕ್ಕೂ ಒಟ್ಟು 16 ವಿಕೆಟ್‌ಗಳನ್ನು ಪಡೆದಿದ್ದ ಜೊಮೆಲ್ ವಾರಿಕಲ್ ‘ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor