Photograph: AFP

ಪ್ಯಾರಿಸ್: ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಶನಿವಾರ ಪ್ಯಾರಿಸ್ ಮಾಸ್ಟರ್ಸ್ ಫೈನಲ್ ಪ್ರವೇಶಿಸಿದ್ದಾರೆ. ಅವರು ಸೆಮಿಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ರನ್ನು 6-4, 6-4 ಸೆಟ್‌ಗಳಿಂದ ಸೋಲಿಸಿದರು.

ಅವರು ಫೈನಲ್‌ನಲ್ಲಿ ಅಮೆರಿಕದ ಬೆನ್ ಶೆಲ್ಟನ್‌ರನ್ನು ಎದುರಿಸಲಿದ್ದಾರೆ.

‘‘ವಿಶ್ವದ ನಾಲ್ಕನೇ ರ್ಯಾಂಕಿಂಗ್ ಆಟಗಾರ ಶೆಲ್ಟನ್‌ರನ್ನು ಎದುರಿಸುವುದು ಟೆನಿಸ್‌ನ ಅತ್ಯುತ್ತಮ ಸವಾಲುಗಳಲ್ಲಿ ಒಂದು’’ ಎಂದು ಪಂದ್ಯದ ಬಳಿಕ ಮಾತನಾಡಿದ ಅಲ್ಕರಾಜ್ ಹೇಳಿದರು.

ಈ ಋತುವಿನ ಆರಂಭದಲ್ಲಿ ಯುಎಸ್ ಓಪನ್ ಕ್ವಾರ್ಟರ್-ಫೈನಲ್‌ನಲ್ಲಿ ಅಲ್ಕರಾಜ್‌ರನ್ನು ಶೆಲ್ಟನ್ ಸೋಲಿಸಿದ್ದರು. ಆ ಬಳಿಕ, ಇಬ್ಬರ ನಡುವಿನ ಮೊದಲ ಮುಖಾಮುಖಿ ಇದಾಗಿದೆ.

ಮತ್ತೊಂದೆಡೆ, ಯುಎಸ್ ಓಪನ್ ರನ್ನರ್-ಅಪ್ ಶೆಲ್ಟನ್, ವಿಶ್ವದ 47ನೇ ರ್ಯಾಂಕಿಂಗ್ ಆಟಗಾರ ಫ್ರಾನ್ಸ್‌ನ ಲುಕಾ ವಾನ್ ಆಶ್ಚೆ ಅವರ ಅದ್ಭುತ ಓಟಕ್ಕೆ 5-7, 6-3, 6-4 ಸೆಟ್‌ಗಳಿಂದ ಬ್ರೇಕ್ ಹಾಕಿ ಫೈನಲ್ ತಲುಪಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor