ಲಿಯೊನೆಲ್ ಮೆಸ್ಸಿ | Photo Credit : PTI

ಹೊಸದಿಲ್ಲಿ: ಅರ್ಜೆಂಟೀನ ಸೂಪರ್ಸ್ಟಾರ್ ಲಿಯೊನೆಲ್ ಮೆಸ್ಸಿ ಶನಿವಾರ 2026ರ ಆವೃತ್ತಿಯ ‘ಗೋಲ್ಡನ್ ಬೂಟ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಮೂಲಕ ಮೇಜರ್ ಲೀಗ್ ಸಾಕರ್ (ಎಮ್ಎಲ್ಎಸ್)ನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.

31 ಪಂದ್ಯಗಳಲ್ಲಿ 26 ಗೋಲುಗಳನ್ನು ಗಳಿಸಿರುವ ಅವರು, ಲೀಗ್ ಇತಿಹಾಸದಲ್ಲೇ ಸತತವಾಗಿ ಎರಡು ಬಾರಿ ಗೋಲ್ಡನ್ ಬೂಟ್ ಗೆದ್ದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಅದೇ ವೇಳೆ, ಎಫ್ಸಿ ಡಲ್ಲಾಸ್‌ನ ಫಾರ್ವರ್ಡ್ ಆಟಗಾರ ಪೆಟಾರ್ ಮೂಸಾ 22 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ನ್ಯಾಶ್ವಿಲ್ ಎಸ್ಸಿಯ ಸ್ಯಾಮ್ ಸುರಿಜ್ 21 ಗೋಲುಗಳನ್ನು ದಾಖಲಿಸಿದ್ದಾರೆ.

2023ರಲ್ಲಿ ಪ್ಯಾರಿಸ್ ಸೇಂಟ್-ಜರ್ಮೈನ್ (ಪಿಎಸ್ಜಿ) ನಿಂದ ಮಯಾಮಿ ತಂಡವನ್ನು ಸೇರಿದ ಮೆಸ್ಸಿ, ಈ ಕ್ಲಬ್ ಲೀಗ್‌ನಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸದಸ್ಯರಾಗಿರುವ ತಂಡವು ಕಳೆದ ಆವೃತ್ತಿಯ ಮೊದಲ ಎಮ್ಎಲ್ಎಸ್ ಕಪ್ ಸೇರಿದಂತೆ ನಾಲ್ಕು ಟ್ರೋಫಿಗಳನ್ನು ಗೆದ್ದಿದೆ. ಅವರು 2025ರ ಆವೃತ್ತಿಯಲ್ಲಿ 29 ಗೋಲುಗಳನ್ನು ಗಳಿಸಿದ್ದರು ಹಾಗೂ ಆ ಮೂಲಕ ಸತತ ಎರಡು ವರ್ಷಗಳಲ್ಲಿ ಕನಿಷ್ಠ 25 ಗೋಲುಗಳನ್ನು ಬಾರಿಸಿದ ಲೀಗ್ ಇತಿಹಾಸದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

39 ವರ್ಷದ ಈ ಫಾರ್ವರ್ಡ್ ಆಟಗಾರ 21 ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ ಈ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ಆದರೆ, ಅಕ್ಟೋಬರ್‌ನಲ್ಲಿ ತನ್ನ ಎಂಎಲ್ಎಸ್ ಕ್ಲಬ್‌ನೊಂದಿಗಿನ ಒಪ್ಪಂದವನ್ನು 2028ರವರೆಗೆ ವಿಸ್ತರಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor