Asian Games | ಶಾಟ್ಪುಟ್: ಮನ್ಪ್ರೀತ್ ಕೌರ್ ಗೆ ಕಂಚು
ಮನ್ಪ್ರೀತ್ ಕೌರ್ | Photo Credit : PTI
ನಗೋಯ, ಸೆ.25: ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಶಾಟ್ಪುಟ್ ಫೈನಲ್ ನಲ್ಲಿ 17.17 ಮೀ. ದೂರ ಎಸೆದ ಮನ್ಪ್ರೀತ್ ಕೌರ್ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದರು. ಮನ್ಪ್ರೀತ್ ಸಹ ಆಟಗಾರ್ತಿ ಕೃಷ್ಣ ಜಯಶಂಕರ್ ಮೆನನ್ 16.57 ಮೀ. ದೂರಕ್ಕೆ ಶಾಟ್ಪುಟ್ ಎಸೆದು ಐದನೇ ಸ್ಥಾನ ಪಡೆದರು.
36ರ ವಯಸ್ಸಿನ ಮನ್ಪ್ರೀತ್ ಮಹಿಳೆಯರ ಶಾಟ್ಪುಟ್ನಲ್ಲಿ ಏಶ್ಯನ್ ಗೇಮ್ಸ್ ಪದಕ ಗೆದ್ದ ಭಾರತದ ಮೂರನೇ ಅತ್ಲೀಟ್ ಎನಿಸಿಕೊಂಡರು.
ಚೀನಾದ ಜಿಯಾಯೊನ್ ಸಾಂಗ್ (19.40 ಮೀ.) ಚಿನ್ನದ ಪದಕ ಜಯಿಸಿದರು. ಚೀನಾದ ಇನ್ನೋರ್ವ ಅತ್ಲೀಟ್ ಲಿನ್ರು ಝಾಂಗ್ (18.14 ಮೀ.) ಬೆಳ್ಳಿ ಜಯಿಸಿದರು.
ಮೊದಲ ಪ್ರಯತ್ನದಲ್ಲಿ 16.32 ಮೀ. ದೂರ ಶಾಟ್ಪುಟ್ ಎಸೆದ ಮನ್ಪ್ರೀತ್ ಪ್ರತಿ ಸುತ್ತಿನಲ್ಲೂ ಪ್ರಗತಿ ಸಾಧಿಸಿ, ನಾಲ್ಕನೇ ಸುತ್ತಿನಲ್ಲಿ ಪದಕ ಗೆಲ್ಲುವ ಮಟ್ಟಕ್ಕೆ ಶಾಟ್ಪುಟ್ ಎಸೆದರು.
ಪಟಿಯಾಲದ ಮನ್ಪ್ರೀತ್ 2023ರ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸಿದ್ದರು. 2022ರಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ (18.06 ಮೀ.) ನೀಡಿದ್ದರು.
ನಾಲ್ಕು ವರ್ಷಗಳ ಡೋಪಿಂಗ್ನಿಂದಾಗಿ ನಿಷೇಧಕ್ಕೊಳಗಾಗಿದ್ದ ಮನ್ಪ್ರೀತ್ 2021ರಲ್ಲಿ ವಾಪಸಾಗಿದ್ದರು. ಈ ಹಿಂದಿನ ಏಶ್ಯನ್ ಗೇಮ್ಸ್ನಲ್ಲಿ ಮನ್ಪ್ರೀತ್ ಐದನೇ ಸ್ಥಾನ ಪಡೆದಿದ್ದರು. ಈ ವರ್ಷಾರಂಭದಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಸ್ವಲ್ಪದರಲ್ಲಿ ಪದಕ ವಂಚಿತರಾಗಿದ್ದರು. ಆಗ 17.49 ಮೀ. ದೂರ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದರು.